ಜಿಲ್ಲಾಸುದ್ದಿ

ಅಂಬಿಗರ ಚೌಡಯ್ಯ ಮೂರ್ತಿ ಧ್ವಂಸಕ್ಕೆ ರಾಜಕೀಯ ಬಣ್ಣ ಬೇಡ : ರಾಚಣ್ಣ ತಳವಾರ

ಕಲಬುರಗಿ : ಚಿತ್ತಾಪುರ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಿ ಕಬ್ಬಲಿಗ ಸಮಾಜದ ನಾಯಕರು ರಾಜಕೀಯ ಬಣ್ಣ ಹಚ್ಚದಂತೆ ಎಚ್ಚರಿಕೆ ನೀಡಿದ್ದಾರೆ.

ಯಡ್ರಾಮಿ ತಾಲೂಕ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ರಾಚಣ್ಣ ತಳವಾರ ಅವರು ಪ್ರತಿಕ್ರಿಯೆ ನೀಡುತ್ತಾ — “ಮೂರ್ತಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ ಈ ಪ್ರಕರಣದಲ್ಲಿ ಯಾವುದೇ ಪಕ್ಷ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು” ಎಂದು ಹೇಳಿದರು.

ಅವರು ಮುಂದುವರಿಸಿ, “ಕಿಡಿಗೇಡಿಗಳು ಯಾವ ಸಮಾಜದವರಾಗಿದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದ ಶ್ರೇಷ್ಠ ಶರಣ ಅಂಬಿಗರ ಚೌಡಯ್ಯನವರ ಅವಮಾನಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸೂಕ್ತವಲ್ಲ” ಎಂದು ಹೇಳಿದರು.

ಕೆಲ ಕೋಲಿ ಸಮಾಜದ ಮುಖಂಡರು ರಾಜಕೀಯ ಪಕ್ಷಗಳ ಪರವಾಗಿ ವರ್ತಿಸುತ್ತಿರುವುದು ಖಂಡನೀಯ ಎಂದು ರಾಚಣ್ಣ ತಳವಾರ ವಿಷಾದ ವ್ಯಕ್ತಪಡಿಸಿದರು. “ಪಕ್ಷಭೇದ ಮರೆತು, ಸಮಾಜದ ಗೌರವ ಮತ್ತು ಏಕತೆಯನ್ನು ಕಾಪಾಡಲು ಎಲ್ಲರೂ ಒಗ್ಗೂಡಬೇಕು. ಜನರು ಸ್ವಾರ್ಥಪರ ಮುಖಂಡರಿಗೆ ಭವಿಷ್ಯದಲ್ಲಿ ಪಾಠ ಕಲಿಸುತ್ತಾರೆ,” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ವಿಠ್ಠಲ್ ಹರನೂರ, ಶಂಕರಗೌಡ ಜಂಬರಾಳ, ಮೌನೇಶ್ ಅಣಜಿಗಿ, ಮಾಂತೇಶ್ ಕಡಕೋಳ, ಶ್ರೀಮಂತ ಕರ್ಕಿಹಳ್ಳಿ, ಭಗವಂತರಾಯ ಯಲಗೋಡ, ಬಸವರಾಜ ಇಜೇರಿ, ಶಿವಕುಮಾರ್ ಕೊಳಗೇರಿ, ದೇವು ಮಲಬಾದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button