ಕಲಬುರಗಿಜಿಲ್ಲಾಸುದ್ದಿ
ಫೆ. 5ರಂದು ಗಾಯಕ ವಿಜಯಕುಮಾರ್ ಬಿರಾದಾರರಿಗೆ ನುಡಿ ನಮನ ಕಾರ್ಯಕ್ರಮ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತು ಮಂದೇವಾಲ ವಲಯದ ಮಾಜಿ ಅಧ್ಯಕ್ಷರು, ಸೊನ್ನ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಸೊನ್ನ ಗ್ರಾಮ ಪಂಚಾಯತ್ನ ಮಾಜಿ ಸದಸ್ಯರು ಹಾಗೂ ಖ್ಯಾತ ಸಂಗೀತಗಾರ ಮತ್ತು ಗಾಯಕ ವಿಜಯಕುಮಾರ್ ಬಿರಾದಾರ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ಜೇವರ್ಗಿ ನಗರದಲ್ಲಿ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೇವರ್ಗಿ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ತಾಲೂಕಿನ ಗೆಳೆಯರ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ನುಡಿ ನಮನ ಕಾರ್ಯಕ್ರಮದಲ್ಲಿ ನಾಡಿನ ಮಠಾಧೀಶರು, ರಾಜಕೀಯ ನಾಯಕರು, ಸಂಗೀತ ಕಲಾವಿದರು, ಗಾಯಕರು ಸೇರಿದಂತೆ ಜೇವರ್ಗಿ ತಾಲ್ಲೂಕಿನ ಸಮಸ್ತ ಜನತೆ ಭಾಗವಹಿಸಬೇಕು ಎಂದು ಜೇವರ್ಗಿ ತಾಲ್ಲೂಕಿನ ಕನ್ನಡ ಪರ ಸಂಘಟನೆಗಳು, ಸಾಹಿತ್ಯಾಸಕ್ತರು ಹಾಗೂ ಕಲಾವಿದರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



