ಭಾಗೋಡಿ ಗ್ರಾಮದಲ್ಲಿ ಅಕ್ರಮಮದ್ಯ ಮಾರಾಟ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಚಿತ್ತಾಪುರ: ತಾಲೂಕಿನ ಭಾಗೋಡಿ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ಕಿರಾಣಿ ಅಂಗಡಿ, ಪಾನಶಾಪ್, ಹೋಟೆಲ್ ಹಾಗೂ ಮನೆಯಲ್ಲಿ ಮದ್ಯ ಮಾರಾಟ ನಡೆಸುತ್ತಿರುವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾಗೋಡಿ ಗ್ರಾಮದ ಹಿರಿಯ ಮುಖಂಡ, ರಾಯಚೂರ ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಹಾಂತಗೌಡ ಪಾಟೀಲ್ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಭಾಗೋಡಿ ಗ್ರಾಮದಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಿರಾಣ ಅಂಗಡಿ, ಪಾನ್ ಶಾಪ್, ಹೋಟಲ್ ಹಾಗೂ ಮನೆಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ಚಿಕ್ಕ ಮಕ್ಕಳು, ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರು ರಸ್ತೆಯಲ್ಲಿ ಕುಡುಕರ ಕಾಟದಿಂದ ತಿರುಗಾಡಲು ಸಹ ಭಯಪಡುತ್ತಿದ್ದಾರೆ. ಕುಡಿತದ ಚಟಕ್ಕೆ ಬಲಿಯಾಗಿ ಜೂಜಾಟ ಮಾಡಿ ಮನೆಯಲ್ಲಿ ಮಹಿಳೆಯರ ಮೇಲೆ ಇರುವ ಒಡವೆಗಳನ್ನು ಮಾರಿ ಕುಟುಂಬ ಬೀದಿಪಾಲಾಗುತ್ತಿವೆ. ಮಹಿಳೆಯರಿಗೆ ಕುಡಿದ ಅಮಲಿನಲ್ಲಿ ಬಂದು ಹೊಡೆ ಬಡೆ ಸಹ ಮಾಡುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ಆನಧಿಕೃತವಾಗಿ ಕಿರಾಣ ಅಂಗಡಿ, ನಾನಾ ಶಾಪ್, ಹೋಟಲ್ ಹಾಗೂ ಮನೆಗಳಲ್ಲಿ ಮಧ್ಯ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಮಧ್ಯ ಮಾರಾಟ ನಡೆಯದಂತೆ ತಡೆಹಿಡಿಯಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರು ಗ್ರಾಪಂ ಪಿಡಿಒ ಓಂಕಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಾಯಚೂರ ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಹಾಂತಗೌಡ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ರಾಜೇಂದ್ರಪ್ಪ ಅರಣಕಲ್, ದೇವಪ್ಪ ಡೋಣಗಾಂವ, ಶಿವಕುಮಾರ್ ಕಲಬುರಗಿ, ದೇವಿಂದ್ರ ನಾಟಿಕಾರ್, ಜೂಲ್ಫೀಕರ್ ಖಾಜಿ, ಸಂದೀಪ್ ಹಾಸಭ ಕಾಶಿನಾಥ್ ಭಂಗಿ, ಗುಂಡಪ್ಪ ಕಲಬುರಗಿ, ಪುನೀತ್ ಐನಾಪುರ್, ಮಲ್ಲಿಕಾರ್ಜುನ್ ಏರಿ, ದೇವಪ್ಪ ಹಾಸಭ, ಅಭಿಷೇಕ್ ಕಲಬುರಗಿ, ಭೋಜು ಶೇರಿ, ಭೀಮು ಕೋಣಿನ್, ವಿಶ್ವನಾಥ್ ಕಲಬುರಗಿ, ದೇವಪ್ಪ ಶೇರಿ, ಗಂಗಾಧರ್ ಬುಳ್ಳಾ, ಹುಸೇನ್ ಕುರೈಷಿ, ಶರಣು ಬೆಣ್ಣೂರ್, ಸಂಪತ್, ಬಸವರಾಜ್ ಕುಸನೂರ್, ಸಂತೋಷ್ ನದಿಮುಲ್ಕರ್ ಸೇರಿದಂತೆ ಇತರರಿದ್ದರು.