ಕಲ್ಯಾಣ ಕರ್ನಾಟಕಯಾದಗಿರಿ

“ಪತ್ನಿಯ ಶೀಲದ ಬಗ್ಗೆ ಶಂಕೆಯಿಂದ ಇಬ್ಬರು ಮಕ್ಕಳ ಹತ್ಯೆ – ಯಾದಗಿರಿಯಲ್ಲಿಘಟನೆಯ”

ಪತ್ನಿಯ ಶೀಲದ ಶಂಕೆಯಿಂದ ಮಕ್ಕಳನ್ನೇ ಕೊಡಲಿಯಿಂದ ಕೊಲೆ ಮಾಡಿದ ತಂದೆ

ಯಾದಗಿರಿ:ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ನಡೆದ ಭಯಾನಕ ಘಟನೆ ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿದೆ. ಪತ್ನಿಯ ಶೀಲದ ಮೇಲೆ ಅನುಮಾನಗೊಂಡ ಪತಿಯೊಬ್ಬ ತನ್ನ ಮುದ್ದು ಮಕ್ಕಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮಲಗಿದ್ದ 5 ವರ್ಷದ ಮಗಳು ಸಾನ್ವಿ ಹಾಗೂ 3 ವರ್ಷದ ಮಗ ಭರತ್ ಮೇಲೆಯೇ ತಂದೆಯಾದ ಶರಣಪ್ಪ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಈ ಕ್ರೌರ್ಯಕ್ಕೆ ಮಗಳು ಸಾನ್ವಿ ಸ್ಥಳದಲ್ಲೇ ಮೃತಪಟ್ಟರೆ, ಮಗ ಭರತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ.

ಮಕ್ಕಳನ್ನು ಕೊಂದ ನಂತರ ಆರೋಪಿ ಕೊಡಲಿ ಸಮೇತ ಪರಾರಿಯಾಗಿದ್ದಾನೆ. ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪತ್ನಿ ಮಕ್ಕಳೊಂದಿಗೆ ಕೆಲ ದಿನಗಳ ಹಿಂದೆ ತವರು ಮನೆಗೆ ತೆರಳಿದ್ದಳು. ಆದರೆ ಶರಣಪ್ಪ ಆಕೆಯನ್ನು ಹಿಂತಿರುಗಿ ಕರೆತಂದು ಮಗಳನ್ನು ಮನೆಗೆ ತಂದುಕೊಂಡು ಬಂದಿದ್ದ. ಘಟನೆ ನಡೆದ ದಿನ ಬೆಳಗ್ಗೆ ಪತ್ನಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಮಲಗಿದ್ದ ಮಕ್ಕಳ ಮೇಲೆ ಈ ಕ್ರೌರ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳನ್ನು ಹತ್ಯೆ ಮಾಡಿದ ನಂತರ ಪರಾರಿಯಾಗಿರುವ ಶರಣಪ್ಪನಿಗಾಗಿ ಪೊಲೀಸರು ವಿಸ್ತೃತ ಹುಡುಕಾಟ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಸುರೇಶ್ ನಾಯಕ್ ಮತ್ತು ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.

Related Articles

Leave a Reply

Your email address will not be published. Required fields are marked *

Back to top button