ಕಲಬುರಗಿಜಿಲ್ಲಾಸುದ್ದಿ
ತಳವಾರ ಸಮಾಜದ ಜಿಲ್ಲಾಧ್ಯಕ್ಷರಾಗಿ ಅಶೋಕ ಕಂಕಿ ಆಯ್ಕೆ

ಜೇವರ್ಗಿ : ತಳವಾರ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಅಶೋಕ ಕಂಕಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಸರ್ದಾರ ರಾಯಪ್ಪ ತಿಳಿಸಿದರು.
ಕಲಬುರಗಿ ನಗರದ ಕೋಲಿ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಳವಾರ ಸಮುದಾಯವನ್ನು ಬೇರು ಮಟ್ಟದಿಂದ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕು ಸೇರಿದಂತೆ ಕಲಬುರಗಿ ಜಿಲ್ಲೆಯಾದ್ಯಾಂತ ಸಂಘಟಿಸಿ ಬಲಿಷ್ಠ-ಗೊಳಿಸಲು ಹಾಗೂ ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ನಿಸ್ವಾರ್ಥದಿಂದ ಸಮಾಜದ ಕೆಲಸ ಕಾರ್ಯಗಳನ್ನು ಮಾಡುವಂತೆ ಅವರು ಸೂಚಿಸಿದರು.
ಸಮಾಜದ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ, ಜನಸಾಮಾನ್ಯ-ರಲ್ಲಿ ತಳವಾರ ಸಮಾಜದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದರ ಜೊತೆಗೆ ಹೋರಾಟಕ್ಕೆ ಅಣಿಗೊಳಿಸಬೇಕು ಎಂದು ಕೋರಿದರು. ತಳವಾರ ಸಮಾಜದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಕಮಾನಮನಿ, ಸಮಾಜದ ಮುಖಂಡರು ಸೇರಿ ಮತ್ತಿತರರು ಉಪಸ್ಥಿತರಿದ್ದರು



