ವಕೀಲ ಕಿಶೋರ ರಾಕೇಶ ವಿರುದ್ಧ ಕಠಿಣ ಶಿಕ್ಷೆಗೆ;ಅಶ್ವಿನ್ ಸಂಕಾ ಆಗ್ರಹ

ಕಲಬುರಗಿ: ಸುಪ್ರೀಂ ಕೋರ್ಟ್ನ 52ನೇ ಮುಖ್ಯ ನ್ಯಾಯಮೂರ್ತಿ ಡಾ. ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ಕಿಶೋರ ರಾಕೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಯುವ ಮುಖಂಡ ಅಶ್ವಿನ್ ಸಂಕಾ ಆಗ್ರಹಿಸಿದ್ದಾರೆ.
“ನ್ಯಾಯಾಂಗದಲ್ಲಿ ಮೀಸಲಾತಿ ಇಲ್ಲ. ಬಿ.ಆರ್. ಗವಾಯಿ ಅವರು ಸ್ವಂತ ಪ್ರತಿಭೆಯಿಂದ ಆಯ್ಕೆಯಾಗಿದ್ದಾರೆ. ನಾನು ಈ ಮಟ್ಟಕ್ಕೆ ಬಂದಿರುವುದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಶಿಕ್ಷಣದ ಕಾರಣ” ಎಂದು ಗವಾಯಿ ಅವರು ಸ್ವತಃ ಪ್ರಭಲವಾಗಿ ಹೇಳಿದ್ದನ್ನು ಸಂಕಾ ಉಲ್ಲೇಖಿಸಿದರು.
“ಆದರೂ, ಮೀಸಲಾತಿ ಕಾರಣದಿಂದ ಗವಾಯಿ ನ್ಯಾಯಮೂರ್ತಿಯಾಗಿದ್ದಾರೆ ಎಂದು ಹೇಳುವ ಮನುವಾದಿ ಚಿಂತನೆ ಹೊಂದಿದವರ ಜಾತಿ ನಿಂದನೆ ಮತ್ತು ದ್ವೇಷಮಯ ವರ್ತನೆ ನಾಚಿಕೆಗೇಡಿತನದಾಗಿದೆ” ಎಂದು ಅವರು ತೀವ್ರವಾಗಿ ಖಂಡಿಸಿದರು.
“ಮುಖ್ಯ ನ್ಯಾಯಮೂರ್ತಿ ಮೇಲೆ ನಡೆದ ಈ ದಾಳಿ ದೇಶದ ನ್ಯಾಯಾಂಗದ ಮೇಲೆ ನಡೆದ ದಾಳಿ ಎಂಬುದರಲ್ಲಿ ಸಂಶಯವಿಲ್ಲ. ಇಂತಹ ಕೃತ್ಯಕ್ಕೆ ಪ್ರೋತ್ಸಾಹ ನೀಡದಂತೆ ಕಿಶೋರ ರಾಕೇಶ್ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಅಶ್ವಿನ್ ಸಂಕಾ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.