ಹಾವು ಕಡಿತದಿಂದ ನಿಧನ, ಸರ್ಕಾರದ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ: ತಾಪಂ ಇಒ

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯತ್ ಪಂಪ್ ಆಪರೇಟರ್ ಮಾರ್ಥಂಡಪ್ಪ ವಿಶ್ವಕರ್ಮ ರಾಜೋಳ್ಳಾ (44) ಹಾವು ಕಡಿತದಿಂದ ಶುಕ್ರವಾರ ಮೃತಪಟ್ಟಿದ್ದು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಡೋಣಗಾಂವ ಮತ್ತು ರಾಜೋಳ್ಳಾ ಗ್ರಾಮದ ಮುಖಂಡರು ಭೇಟಿ ನೀಡಿದರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ ಮಾತನಾಡಿ, ಡೋಣಗಾಂವ ಗ್ರಾಮ ಪಂಚಾಯತ್ ಪಂಪ್ ಆಪರೇಟರ್ ಮಾರ್ಥಂಡಪ್ಪ ವಿಶ್ವಕರ್ಮ ಹಾವು ಕಡಿತದಿಂದ ಮೃತಪಟ್ಟಿದ್ದಾನೆ. ಸರ್ಕಾರದ ವತಿಯಿಂದ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸಿಗುವ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಿಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಮೃತ ಮಾರ್ಥಂಡಪ್ಪ ವಿಶ್ವಕರ್ಮ ಪತ್ನಿ ಕಾಳಮ್ಮ ಮಾತನಾಡಿ, ನಮ್ಮ ಕುಟುಂಬಕ್ಕೆ ನಮ್ಮವರು ಆಧಾರಸ್ತಂಭ ಆಗಿದ್ದರು. ತೀರಾ ಬಡತನದಲ್ಲಿ ನಮ್ಮ ಜೀವನ ನಡೆಯುತ್ತಿದೆ ಯಾವುದೇ ಸಂಪನ್ಮೂಲ ಇಲ್ಲ ಹೀಗಾಗಿ ನಮ್ಮ ಕುಟುಂಬ ನಿರ್ವಹಣೆಗೆ ಸರ್ಕಾರದ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿದ್ರಾಮ ರೆಡ್ಡಿ ಪಾಟೀಲ, ಸುರೇಶ್ ಕುಲಕರ್ಣಿ, ಮಲ್ಲಿಕಾರ್ಜುನ ರಾಜೋಳ್ಳಾ, ಶರಣಪ್ಪ ಹೊನ್ನಪೂರ, ಮಂಜುನಾಥ ಚೂರಿ, ಶಂಕರ್ ಕ್ಯಾಲಬಾ, ಭೀಮು ಸಾಲಿ, ಬಸು ಪರ್ಮಾ, ಶರಣಪ್ಪ ಪೂಜಾರಿ, ರಾಮು ಸಾಲಿ ಸೇರಿದಂತೆ ಇತರರು ಇದ್ದರು.