ಬಿಜೆಪಿಯವರಿಗೆ ಪ್ರಿಯಾಂಕ್ ಖರ್ಗೆ ಸಿಂಹಸ್ವಪ್ನ: ಭೀಮಣ್ಣ ಸಾಲಿ ಹೇಳಿಕೆ
ಚಿತ್ತಾಪುರ ಸಂಪೂರ್ಣ ಬಂದ್ ಯಶಸ್ಸು, ಅಂಗಡಿ ಮುಂಗಟ್ಟುಗಳು ಬಂದ್, ವ್ಯಾಪಾರ ವಹಿವಾಟು ಸ್ತಬ್ಧ, ಸಾರಿಗೆ ಬಸ್‌ಗಳು ಸ್ಥಗೀತ

ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರಿಗೆ ಅವಾಚ್ಯವಾಗಿ ಹಾಗೂ ಅಶ್ಲೀಲ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷಗೆ ಗುರಿಪಡಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಒತ್ತಾಯಿಸಿದರು.
ಪಟ್ಟಣದಲ್ಲಿ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಚಿತ್ತಾಪುರ ಬಂದ ಕರೆಯ ನೇತೃತ್ವವಹಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಂಹ ಸ್ವಪ್ನವಾಗಿದ್ದಾರೆ ಎಂದರು. ಖರ್ಗೆ ಕುಟುಂಬದವರ ಬಗ್ಗೆ ಅವಹೇಳನಕಾರಿ ಮಾತನಾಡಿ, ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದು ಖಂಡನೀಯವಾಗಿದೆ. ಬುದ್ದ, ಬಸವ, ಅಂಬೇಡ್ಕರ್ ತತ್ವದ ಮೇಲೆ ಖರ್ಗೆ ಅವರು ಅಧಿಕಾರಿ ನಡೆಸುತ್ತಿದ್ದಾರೆ. ಸಂವಿಧಾನದ ಆಶಯದಂತೆ ಸಚಿವ ಸ್ಥಾನ ನಿಭಾಯಿಸುತ್ತಿದ್ದಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಿದರು.
ಚಿತ್ತಾಪುರ ಬಂದ್ ಪ್ರತಿಭಟನೆ ವೇಳೆ ವಿಷ ಕುಡಿಯಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತ ಸಾಬಣ್ಣ ಭರಾಟೆ, ಸರ್ಕಾರಿ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಮುಂದುವರಿಕೆ ಚಿತ್ತಾಪುರ ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರಿಗೆ ಅವಾಚ್ಯವಾಗಿ ಹಾಗೂ ಅಶ್ಲೀಲ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ ಘಟನೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರೆ ನೀಡಿದ ಚಿತ್ತಾಪುರ ಬಂದ್ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ವಿಷ ಕುಡಿಯಲು ಯತ್ನಿಸಿದ ಘಟನೆ ಲಾಡ್ಡಿಂಗ್ ಕ್ರಾಸ್ ಹತ್ತಿರ ಗುರುವಾರ ನಡೆದಿದೆ. ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ. ತಾಲೂಕಿನ ದಂಡೋತಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಾಬಣ್ಣ ಭರಾಟೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ, ಈ ವೇಳೆ ಅಕ್ಕಪಕ್ಕದಲ್ಲಿ ಇದ್ದ ಕಾಂಗ್ರೆಸ್ ಮುಖಂಡರು ರಕ್ಷಣೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಸಾಬಣ್ಣ ಭರಾಟೆ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ ಚಿಕಿತ್ಸೆ ಮುಂದುವರಿದಿದೆ.
ಪೊಲೀಸರು ಜೀಪಿನಲ್ಲಿ ತೆಗೆದುಕೊಂಡು ಹೋಗುವಾಗಲೂ ಸಾಬಣ್ಣ ಭರಾಟೆ ಮಾತ್ರ ತನ್ನ ಪ್ರಾಣದ ಹಂಗನ್ನು ತೊರೆದು ಪ್ರಿಯಾಂಕ್ ಖರ್ಗೆ ಅವರಿಗೆ ಜಯವಾಗಲಿ ಎಂದು ಜಯಘೋಷ ಮಾತ್ರ ಕೂಗುತ್ತಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ ಮಾತನಾಡಿ, ಸಚಿವ ಖರ್ಗೆ ಕುಟುಂಬದವರ ಬಗ್ಗೆ ಅವಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವ್ಯಕ್ತಿ ಆರ್‌ಎಸ್‌ಎಸ್ ಎಂದು ಹೇಳಲಾಗಿದೆ. ವೈಯಕ್ತಿಕವಾಗಿ ಯಾರ ವಿರುದ್ಧವೂ ನಿಂದನೆ ಮಾಡಬಾರದು. ದೇವಸ್ಥಾನ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ಮಾಡಬಾರದು ಹೇಳಿದ್ದಾರೆ ಹೊರತು ವೈಯಕ್ತಿಕ ತಮ್ಮ ಸ್ಥಳಗಳಲ್ಲಿ ನಿಷೇದ ಮಾಡಲು ಹೇಳಿಲ್ಲ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಘನತೆಗೆ ಕೆಟ್ಟ ಹೆಸರು ತರಲು ಆರ್‌ಎಸ್‌ಎಸ್‌ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಒಬ್ಬ ಒಳ್ಳೇಯ ಸಚಿವ ಖರ್ಗೆ ಅವರನ್ನು ಟೀಕಿಸುವ ಹಾಗೂ ವೈಯಕ್ತಿಕ ನಿಂದನೆ ಮಾಡುವ ಆರ್‌ಎಸ್‌ಎಸ್ ಚಾಳಿ ಸರಿಯಾದುದ್ದಲ್ಲ. ಸತ್ಯ ಹೇಳಿ ರಾಜಕಾರಣ ಮಾಡುವ ವ್ಯಕ್ತಿ ಎಂದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು. ಅಭಿವೃದ್ದಿ ಪರ ಕೆಲಸ ಮಾಡುತ್ತಿದ್ದಾರೆ.
ಬಿಜೆಪಿಯವರು ಸಂವಿಧಾನ ಅಳಿಸಲು ಹೋರಾಡುತಿದ್ದಾರೆ. ಆದರೆ ಸಚಿವ ಖರ್ಗೆ ಅವರು ಸಂವಿಧಾನ ಉಳಿಸಲು ಹೋರಾಡುತ್ತಿದ್ದಾರೆ. ಬಿಜೆಪಿಯವರು ದ್ವೇಷ ವಿಷ ಬೀಜ ಬಿತ್ತುತ್ತಿದ್ದಾರೆ. ಕೋಮ ಗಲಭೆ ತಪ್ಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಅವರಿಗೆ ಪತ್ರ ಬರದಿದ್ದಾರೆ. ಅದನ್ನು ಸಹಿಸಲು ಆರ್‌ಎಸ್‌ಎಸ್, ಬಿಜೆಪಿಯವರಿಗೆ ಆಗುತ್ತಿಲ್ಲ. ಆರ್‌ಎಸ್‌ಎಸ್ ನಿಷೇಧ ಮಾಡಲು ಎಲ್ಲಿ ಹೇಳಿಲ್ಲ. ಆದರೆ ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ನಿಷೇಧ ಮಾಡಬೇಕೆಂದು ಹೇಳಿದ್ದಾರೆ ಎಂಬುದನ್ನು ಅವರು ತಿಳಿದುಕೊಳ್ಳಬೇಕೆಂದು ಹೇಳಿದರು.
ಬೃಹತ ಪ್ರತಿಭಟನೆ ಮೆರವಣಿಗೆ: ಅಂಗಡಿ ಮುಂಗಟ್ಟುಗಳು ಬಂದ:
ಕ್ಷೇತ್ರದ ಶಾಸಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದವರಿಗೆ ಅವಾಚ್ಯವಾಗಿ ಹಾಗೂ ಅಶ್ಲೀಲ ಶಬ್ದಗಳಿಂದ ವೈಯಕ್ತಿಕವಾಗಿ ನಿಂದಿಸಿದ ಘಟನೆಯನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಗುರುವಾರ ಕರೆ ನೀಡಿದ ಚಿತ್ತಾಪುರ ಬಂದ್ ಪ್ರತಿಭಟನೆ ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಯುವ ಕಾರ್ಯಕರ್ತರು ರಸ್ತೆಗಿಳಿದು ಲಾಡ್ಡಿಂಗ್ ಕ್ರಾಸ್ ಹತ್ತಿರ ಮಾನವ ಸರಪಳಿ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಯುವಕರು ಬೈಕ್ ರ‍್ಯಾಲಿ ನಡೆಸಿ ಸಚಿವ ಪ್ರಿಯಾಂಕ್ ಖರ್ಗೆ ಪರ ಜಯಘೋಷಗಳು ಮೊಳಗಿದವು. ಪಟ್ಟಣದ ಚಿತ್ತಾಶಾಹವಲಿ ಚೌಕ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಜನತಾ ಚೌಕ, ಭುವನೇಶ್ವರಿ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಲಾಡ್ಜಿಂಗ್ ಕ್ರಾಸ್ ತಲುಪಿ ಅಲ್ಲಿ ಸಮಾವೇಶಗೊಂಡಿದೆ.ಶಾಲಾಕಾಲೇಜುಗಳು ಹೊರತು ಪಡಿಸಿ ಉಳಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ವ್ಯಾಪಾರ ವಹಿವಾಟು ಸ್ತಬ್ಧವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಬಸ್ಸುಗಳೂ ಸಹ ರಸ್ತೆಗೆ ಇಳಿಯಲಿಲ್ಲ ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.್ದ ಚಿತ್ತಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಬೆಳಿಗ್ಗೆಯಿಂದ ಜನಜೀವನ ಸಂಪೂರ್ಣ ಸ್ಥಬ್ಧಗೊಂಡಿದೆ.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ವಾಡಿ ಬ್ಲಾಕ್ ಅಧ್ಯಕ್ಷ ಮೆಹಮುದ್ ಸಾಬ್, ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಪ್ರಮುಖರಾದ ಶ್ರೀನಿವಾಸ ಸಗರ, ಸಿದ್ದುಗೌಡ ಅಫಜಲಪುರಕರ್, ರಮೇಶ ಕವಡೆ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಯುವ ಅಧ್ಯಕ್ಷ ದೇವು ಯಾಬಾಳ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಮಹ್ಮದ್ ರಸೂಲ್ ಮುಸ್ತಫಾ, ಜಗದೀಶ್ ಚವ್ಹಾಣ, ಶ್ರೀನಿವಾಸರೆಡ್ಡಿ ಪಾಲಪ್, ಶಿವರಾಜ ಪಾಳೆದ, ಜಯಪ್ರಕಾಶ ಕಮಕನೂರ, ಸುನೀಲ ದೊಡ್ಡಮನಿ, ಬಸವರಾಜ ಹೊಸಳ್ಳಿ, ಮಹಾಂತಗೌಡ ದಂಡಗುಂಡ, ನಾಗಯ್ಯ ಗುತ್ತೇದಾರ, ಸಪ್ನಾ ಪಾಟೀಲ, ನಾಗರೆಡ್ಡಿ ಗೋಪಸೇನ್, ಶ್ರೀಕಾಂತ ಸಿಂಧೆ, ಅಜೀಜ್ ಸೇಟ್, ಹಣಮಂತ ಸಂಕನೂರ್, ಸಂಜಯ ಬುಳಕರ, ಶಿವಕಾಂತ ಬೆಣ್ಣೂರಕರ್, ಈರಪ್ಪ ಭೋವಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಎಂ.ಎ.ರಷೀದ್, ಶಿವಾಜಿ ಕಾಶಿ, ಸೂರ್ಯಕಾಂತ ಪೂಜಾರಿ, ಬಸಣ್ಣ ತಳವಾರ, ಶಾಂತಣ್ಣ ಚಾಳೀಕಾರ, ಬಸ್ಸುಗೌಡ ದಂಡಗುಂಡ, ವಿರುಪಾಕ್ಷಿ ಗಡ್ಡದ, ಸೂರ್ಯಕಾಂತ ರದ್ದವಾಡಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಮುಡಬೂಳಕರ್, ಶಿವಯೋಗಿ ಸಾಹು, ಮನ್ಸೂರ ಪಟೇಲ್, ಮಾರುತಿ ಹುಳಗೋಳಕರ್, ಸಂತೋಷ ಪೂಜಾರಿ, ಸೋಮು ಟೋಕಾಪೂರ, ಗಂಗಾಧರ್ ಡಿಗ್ಗಿ, ಸೂರಜ್ ಕಲ್ಲಕ್, ಅನಿಲ್ ವಡ್ಡಡಗಿ, ರಮೇಶ ಬಡಿಗೇರ, ರಾಮಲಿಂಗ ಬಾನರ, ಪ್ರಭು ಹಳಕರ್ಟಿ, ಮಹೇಶ ಕಾಶಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಲಬುರಗಿ ಜಿಲ್ಲಾ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ, ಪಿಎಸ್‌ಐ ತಿರುಮಲೇಶ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.