ಕಲಬುರಗಿಜಿಲ್ಲಾಸುದ್ದಿ

ಕಲ್ಕತ್ತಾ ದೇವಿಯ ಭವ್ಯ ರಥೋತ್ಸವ: ಜೈಘೋಷಗಳ ಮಧ್ಯೆ ಮಾರ್ಗಮ್ಮ ದೇವಿಯ ರಥೋತ್ಸವ.

ಜೇವರ್ಗಿ ಕಲ್ಕತ್ತ ದೇವಿಯ ಜಾತ್ರೆ, ಶಾಸಕ ಸೇರಿ ಹಲವು ಗಣ್ಯರು ಭಾಗಿ

ರಥೋತ್ಸವದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಪಿಐ ರಾಜೆಸಾಬ ನದಾಫ್, ಪಿಎಸ್‌ಐ ಗಜಾನನ ಬಿರಾದಾರ ನೇತೃತ್ವದಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ಒದಗಿಸಲಾಗಿತ್ತು.

ಜೇವರ್ಗಿ: ಜೇವರ್ಗಿ ಪಟ್ಟಣದ ಆರಾಧ್ಯ ದೇವತೆ ಶ್ರೀ ಮರಗಮ್ಮ (ಕಲ್ಕತ್ತ) ದೇವಿಯ ರಥೋತ್ಸವ ಶನಿವಾರ ಲಕ್ಷಾಂತರ ಭಕ್ತರ ಸಮೂಹದ ನಡುವೆ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಾಗಿ ಜರುಗಿತು.

ಬೆಳಗ್ಗೆಯಿಂದಲೇ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಜೇವರ್ಗಿಗೆ ಆಗಮಿಸಿ ದೇವಿಯ ದರ್ಶನ ಪಡೆದರು. ಸಂಪ್ರದಾಯದಂತೆ ಬೆಳಗ್ಗೆ 10 ಗಂಟೆಗೆ ರಥೋತ್ಸವಕ್ಕೆ ಶುಭಾರಂಭವಾಯಿತು. ದೇವಿಯ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ ನಂತರ ದೇವಿಯ ತಳ (ಹೊರವಲಯ) ಕಡೆಗೆ ತಳವಾರ ಸಮುದಾಯದವರು ಮತ್ತು ಭಕ್ತರು ಹೊತ್ತುಕೊಂಡು ಹೋದರು.

ರಥೋತ್ಸವದ ವೇಳೆ “ಜೈ ಕಲ್ಕತ್ತ ದೇವಿ ಮಹಾರಾಜಕೀ ಜೈ, ಮರೆಮ್ಮ ದೇವಿ ಮಹಾರಾಜಕೀ ಜೈ” ಎಂಬ ಜಯಘೋಷಗಳ ನಡುವೆ ಭಕ್ತಿ ಸಂಭ್ರಮ ಉಂಟಾಯಿತು. ಭಕ್ತರು ತಮ್ಮ ಮನದ ಬೇಡಿಕೆಗಳನ್ನು ದೇವಿಗೆ ಅರ್ಪಣೆ ಮಾಡುವ ಸಂಕೇತವಾಗಿ ಹಣ್ಣು-ಕಾಯಿ, ಉತ್ತುತ್ತಿ ಸೇರಿ ಮುಂತಾದ ವಸ್ತುಗಳನ್ನು ರಥದ ಮೇಲೆ ಎಸೆದು ಕೃತಾರ್ಥರಾದರು.

ರಥೋತ್ಸವಕ್ಕೂ ಮುನ್ನ ಶಾಸಕ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸೇರಿದಂತೆ ಅನೇಕ ಗಣ್ಯರು ದೇವಿಯ ದರ್ಶನ ಪಡೆದರು. ತಹಸೀಲ್ದಾರ ಮಲ್ಲಣ್ಣ ಯಲಗೋಡ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಷಣ್ಮುಖಪ್ಪ ಸಾಹು ಗೋಗಿ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ರಮೇಶಬಾಬು ವಕೀಲ, ರಾಜಶೇಖರ ಸೀರಿ, ಶ್ರೀಶೈಲಗೌಡ ಪೊಲೀಸ ಪಾಟೀಲ, ಗುಂಡು ಸಹು ಗೋಗಿ, ಮಲ್ಲಿಕಾರ್ಜುನ ಅವಟಿ, ಭೀಮರಾಯ ಸುರಪುರ, ಶರಣಗೌಡ ಸರಡಗಿ, ಅನೀಲ ರಾಂಪೂರ, ಶಾಂತವೀರ ಪಾಟೀಲ, ಸಂತೋಷ ಸೊಪ್ಪಣ್ಣ, ಕುಪ್ಪಣ್ಣ ಕಲ್ಲಾ, ಼ಷಣ್ಮೂಖಯ್ಯ ಘಂಟಿಮಠ, ನಿಂಗಣ್ಣ ಬಸವಪಟ್ಟಣ, ವಿಶ್ವನಾಥ ಇಮ್ಮಣ್ಣಿ, ಲಕ್ಷಿö್ಮÃಕಾಂತ ಕುಲಕರ್ಣಿ ಹೋತಿನಮಡು, ಈಶ್ವರ ಹಿಪ್ಪರಗಿ, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಮೌನೇಶ ಹಂಗರಗಿ, ಅನಿಲ ದೊಡಮನಿ, ಬಸವರಾಜ ಲಾಡಿ, ಭೀಮು ತಳವಾರ, ಗಿರೀಶ ತುಂಬಗಿ, ಷಣ್ಮೂಖ ಬಸವಪಟ್ಟಣ್ಣ, ಶರಣಗೌಡ ಅವಟಿ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಇದ್ದರು.

ಪಟ್ಟಣದ ಆರಾದ್ಯ ದೇವತೆ ಶ್ರೀ ಮರಗಮ್ಮ (ಕಲ್ಕತ್ತ ) ದೇವಿಯ ರಥೋತ್ಸವವನ್ನು ಲಕ್ಷಾಂತರ ಭಕ್ತರ ಜೈಘೋಷಗಳ ಮಧ್ಯೆ ಶನಿವಾರ ಅದ್ದೂರಿಯಾಗಿ ಜರುಗಿತು.
ಜೇವರ್ಗಿ ಪಟ್ಟಣದ ಶ್ರೀ ಮರಗಮ್ಮ ( ಕಲ್ಕತ್ತ ) ದೇವಿಯ ರಥೋತ್ಸವ ನಿಮಿತ್ತ ತಹಸೀಲ್ದಾರ ಮಲ್ಲಣ್ಣ ಯಲಗೋಡ ಶನಿವಾರ ಬೆಳಗ್ಗೆ 10 ಗಂಟೆಗೆಡ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button