ಅಭಿವೃದ್ದಿ ನಿಗಮ ಸ್ಥಾಪನೆಯಿಂದ ಹಡಪದ ಸಮಾಜ ಅಭಿವೃದ್ದಿ:ರಮೇಶ ಹಡಪದ ಅಭಿಮತ

ಚಿತ್ತಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕ ಹಡಪದ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿರುವುದರಿಂದ ಈಗ ಹಡಪದ ಸಮಾಜದ ಅಭಿವೃದ್ದಿಗೆ ಕಾಲ ಕೂಡಿ ಬಂದಿದೆ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ರಮೇಶ ಹಡಪದ ಕೊಲ್ಲೂರ ಹೇಳಿದರು.
ರಾಜ್ಯ ಸರ್ಕಾರ ಕರ್ನಾಟಕ ಹಡಪದ ಅಭಿವೃದ್ದಿ ನಿಗಮವನ್ನು ಸ್ಥಾಪಸಿ ಆದೇಶ ಮಾಡಿರುವುದರಿಂದ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಘಟಕದವತಿಯಿಂದ ಮಂಗಳವಾರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ವಿಜಯೋತ್ಸವ ಆಚರಣೆ ನೇತೃತ್ವವಹಿಸಿ ಮಾತನಾಡಿದ ಅವರು, ಹಡಪದ ಸಮಾಜ ಅಭಿವೃದ್ಧಿ ನಿಗಮ ಮಾಡಬೇಕೆಂದು ಅನೇಕ ವರ್ಷಗಳ ಕನಸಾಗಿತ್ತು. ರಾಜ್ಯದ ಎಲ್ಲ ಸರ್ಕಾರಗಳಿಗೆ ಅನೇಕ ವರ್ಷಗಳಿಂದ ಮನವಿ ಪತ್ರ ಕೊಟ್ಟು ಹೋರಾಟ ಮಾಡಲಾಗಿತ್ತು. ಆದರೆ ಈಗ ಕಾಲ ಕೂಡಿ ಬಂದಿದೆ ಎಂದರು.
ನಿಗಮ ಸ್ಥಾಪನೆಗೆ ರಾಜ್ಯ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಶಾಸಕ, ಕಲಬುರಗಿ ಜಿಲ್ಲಾ ಉಸ್ತುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನದಿಂದ ಕರ್ನಾಟಕ ಹಡಪದ ಅಭಿವೃದ್ದಿ ಸ್ಥಾಪನೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಶೈಕ್ಷಣಿಕ ಜತೆಗೆ ಉದ್ಯೋಗದಲ್ಲಿಯೂ ಅವಕಾಶ ಹೆಚ್ಚಾಗಲಿದೆ. ಅಭಿವೃದ್ದಿ ನಿಗಮ ಸ್ಥಾಪನೆಯಿಂದಾಗಿ ಹಡಪದ ಸಮಾಜದ ಸರ್ವತೋಮುಖ ಅಭಿದ್ದಿಯಾಗಲಿದೆ ಎಂದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ. ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಪ್ರಮುಖರಾದ ಅಶೋಕ ಹಡಪದ, ಕಲ್ಯಾಣಿ ಹಡಪದ, ಅಶೋಕ ಚೌಕೆ, ಪಂಡಿತ, ಮಹಾದೇವ ಚೌಕಿ, ಮುರುಳಿ ಸಾತನೂರ, ಸೋಮನಾಥ ಹಡಪದ, ಕಾಶಿನಾಥ ಹಡಪದ, ಸಿದ್ದು ಹಡಪದ, ವಿಶ್ವನಾಥ ಹಡಪದ, ನಂದೇಶ ಹಡಪದ, ಚಂದ್ರಶೇಖರ ಹಡಪದ, ಮಹೇಶ ಹಡಪದ, ಗಣಪತಿ ಹಡಪದ, ಸಂಜಯ ಬುಳಕರ್, ಸಂತೋಷ ಪೂಜಾರಿ ಸೇರಿದಂತೆ ಇತರರಿದ್ದರು.