ಕಲಬುರಗಿಜಿಲ್ಲಾಸುದ್ದಿ

ಕರ್ನಾಟಕ ಚಾಲಕರ ಒಕ್ಕೂಟ ಚಾಲಕರ ಹಿತವನ್ನು ಕಾಪಾಡುವ ಸಂಘಟನೆ:ಜಗನ್ ಕಾಶಿ

ಚಿತ್ತಾಪುರ: ಚಾಲಕರಿಂದ,ಚಾಲಕರಿಗಾಗಿ,ಚಾಲಕರಿಗೋಸ್ಕರ ಇರುವ ಈ ಸಂಘಟನೆಯೇ ಕರ್ನಾಟಕ ಚಾಲಕರ ಒಕ್ಕೂಟವಾಗಿದ್ದು, ಚಾಲಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಾಲೂಕು ಅಧ್ಯಕ್ಷ ಜಗನ್ ಕಾಶಿ ಹೇಳಿದರು.

ಪಟ್ಟಣದ ಕಾಶಿ ಗಲ್ಲಿಯ ಸಮುದಾಯ ಭವನದಲ್ಲಿ ಕರ್ನಾಟಕ ಚಾಲಕರ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಚಾಲಕರ ಮತ್ತು ಮಾಲೀಕರ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಹಾಗೂ ಚಾಲಕರ ಯೂನಿಯನ್ ಕಾರ್ಡ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಲಕರು ತೊಂದರೆಯಲ್ಲಿದ್ದಾಗ ಅವರಿಗೆ ಒಕ್ಕೂಟದಿಂದ ಸಹಾಯ ಸಹಕಾರ ಮಾಡಲಾಗುವುದು ಎಂದರು.

ಯಾವುದೇ ಒಂದು ಸಂಘಟನೆ ಇದ್ದರೂ ಅದೊಂದು ಜಾತಿ ಧರ್ಮಕ್ಕೆ ಮೀಸಲು ಇರುತ್ತದೆ ಆದರೆ ನಮ್ಮ ಚಾಲಕರ ಸಂಘಟನೆ ಎಲ್ಲಾ ಸಮಾಜದವರು ಯಾವುದೇ ಜಾತಿ ಧರ್ಮ ಇಲ್ಲದ ಸಂಘಟನೆ ನಾವು ಎಲ್ಲರೂ ಒಂದೇ, ನಾವು ಒಂದೇ ತಾಯಿಯ ಮಕ್ಕಳು ಹಾಗೇ ಅಣ್ಣ-ತಮ್ಮಂದಿರಾಗಿ ಚಾಲಕರು ಬದುಕುತ್ತೇವೆ. ಚಾಲಕರ ಲೇಬರ್ ಕಾರ್ಡ್ ಪ್ರತಿಯೊಬ್ಬ ಚಾಲಕ ಮಾಡಿಸಬೇಕು ಯಾಕೆಂದರೆ ಆ ಕಾರ್ಡನಲ್ಲಿ ಬಹಳಷ್ಟು ಸೌಲಭ್ಯಗಳು ಇದ್ದಾವೆ, ಮುಂದೆ ನಾವು ಅಪಘಾತದಲ್ಲಿ ಮೃತಪಟ್ಟರೆ ನಮ್ಮ ಕುಟುಂಬಕ್ಕೆ 5 ಲಕ್ಷ ಪರಿಹಾರ ಸಿಗುತ್ತದೆ ಹಾಗೂ ನಮ್ಮ ಎರಡು ಮಕ್ಕಳಿಗೆ ತಲಾ 24 ಸಾವಿರ ಹಣ ಸಿಗುತ್ತದೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಕ್ಷಯ ಮೋರೆ, ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಜಗನ್ನಾಥ್ ಮುಡಬೂಳಕರ್, ಹಿರಿಯ ಚಾಲಕ ಮಲ್ಲಿಕಾರ್ಜುನ್ ಪಾಟೀಲ್, ಆಟೋ ಚಾಲಕರ ಅಧ್ಯಕ್ಷ ಮಹೇಶ ಕಾಶಿ, ರಾವೂರ ವಲಯ ಅಧ್ಯಕ್ಷ ಶರಣು ಪಾಟೀಲ್, ವಾಡಿ ವಲಯ ಅಧ್ಯಕ್ಷ ಮನೋಹರ್, ಶಹಾಬಾದ್ ವಲಯ ಅಧ್ಯಕ್ಷ ನಾಗು ಕುಂಬಾರ್, ಗೌರವಾಧ್ಯಕ್ಷ ತಮ್ಮಣ್ಣ ಸುನಾರ್, ಉಪಾಧ್ಯಕ್ಷ ಸೋಮಶೇಖರ್, ಭೀಮಶಾ ದಂಡಗುAಡ ಪ್ರಧಾನ ಕಾರ್ಯದರ್ಶಿ ರವಿ ದೊಡ್ಡಮನಿ, ಬದ್ಲು ಸೇರ್, ಬಸವರಾಜ್ ಬಂಡಿ, ರಾಮಚಂದ್ರ ಪಂಚಾAಳ್, ಮಹೇಶ್ ದೊಡ್ಡಮನಿ, ಸಾಗರ್ ಚಿಟ್ಟೆಕಾರ, ಮಹೇಶ್ ರಾವೂರ, ಉಮೇಶ್ ಗೊಂದಳ್ಳಿ, ಕುಮಾರ್ ಮೊಗಲಾ, ಸಂಚಾರಕರಾದ ಶಿವಕುಮಾರ್ ಮೂಡಬೂಳ, ಮಲ್ಲಿಕಾರ್ಜುನ್ ಮಾಡಗಿ, ಲಕ್ಷ್ಮಣ್ ಭೋವಿ, ಬೋಜು ಕಾಶಿ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button