ಚಿತ್ತಾಪುರದಲ್ಲಿ ನ.30 ರಂದು ಹೊನಲು ಬೆಳಕಿನ ಕ್ರಿಕೆಟ್ (ಐಪಿಎಲ್ ಮಾದರಿ) ಟೂರ್ನಮೆಂಟ್

ಚಿತ್ತಾಪುರ : ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ನಿಮಿತ್ತ ಪಟ್ಟಣದ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕ್ರಿಕೆಟ್ (ಐಪಿಎಲ್ ಮಾದರಿ) ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಜೈ ಭವಾನಿ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖ ಮೋಹನ್ ಚವ್ಹಾಣ ಹೇಳಿದರು.
ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಕಾರದೊಂದಿಗೆ ಜೈ ಭವಾನಿ ಕ್ರಿಕೆಟ್ ಅಸೋಸಿಯೇಷನ್ ನೇತೃತ್ವದಲ್ಲಿ ಇದೇ ನವೆಂಬರ್ 30 ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಯಾಗಲಿದೆ. ಇದಕ್ಕೂ ಮುನ್ನ ನ.25 ರಂದು ಕ್ರಿಕೆಟ್ ತಂಡಗಳ ಹಾಗೂ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಒಟ್ಟು 8 ತಂಡಗಳು ಭಾಗವಹಿಸಲಿದ್ದು 12 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು ಫೈನಲ್ ಪಂದ್ಯದ ದಿನಾಂಕ ನಂತರ ತಿಳಿಸಲಾಗುವುದು.
ನ.15 ರಂದು ಕ್ರಿಕೆಟ್ ಪಟುಗಳ ಐಪಿಎಲ್ ಮಾದರಿಯಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಪ್ರಥಮ ಬಹುಮಾನ 51 ಸಾವಿರ ಮತ್ತು ಕಪ್, ದ್ವಿತೀಯ ಬಹುಮಾನ 25 ಸಾವಿರ ಮತ್ತು ಕಪ್ ಸೇರಿದಂತೆ ಮ್ಯಾನ್ ಆಫ್ ದಿ ಸಿರೀಸ್, ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಬಾಲರ್, ಬೆಸ್ಟ್ ಬ್ಯಾಟ್ಸಮನ್ ರೂ. 2500 ಜೊತೆಗೆ ಕಪ್ ನೀಡಲಾಗುವುದು ಎಂದು ತಿಳಿಸಿದರು.
18 ವರ್ಷ ಮೇಲ್ಪಟ್ಟ ಕ್ರಿಕೆಟ್ ಪಟುಗಳು ಹೆಸರು ನೋಂದಾಯಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ 8660456419 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಬ್ಯಾಡ್ಮಿಂಟನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಾಬು ಕಾಶಿ ಮಾತನಾಡಿ, ನಾಗಾವಿ ನಾಡು ಚಿತ್ತಾಪುರದಲ್ಲಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುತ್ತಿರುವುದು ಈ ಭಾಗದ ಕ್ರಿಕೆಟ್ ಪಟುಗಳಿಗೆ ಸ್ಪೂರ್ತಿ ಹಾಗೂ ಪ್ರೇರಣೆ ಆಗಲಿದೆ.
ಇದು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಚಿತ್ತಾಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರ್ಮಾಣ ಮಾಡಿದ ಸುಸಜ್ಜಿತ ಕ್ರೀಡಾಂಗಣವೇ ಕಾರಣ. ಅವರು ಬಹಳ ಮುತುವರ್ಜಿ ವಹಿಸಿ ಒಳ್ಳೆಯ ಕ್ರೀಡಾಂಗಣ ನಿರ್ಮಿಸಿರುವುದರಿಂದಲೇ ಇಲ್ಲಿ ಬ್ಯಾಡ್ಮಿಂಟನ್, ಕ್ರಿಕೆಟ್ ಪಂದ್ಯಾವಳಿಗಳು ನಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಾಬಣ್ಣ ಕಾಶಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಹಿರಿಯ ಆಟಗಾರರು ಹಾಗೂ ತರಬೇತುದಾರ ಶಂಕರಸಸಿಂಗ, ಪ್ರಮುಖರಾದ ಸಂತೋಷ ಕಲಾಲ್, ಭೀಮಸಿಂಗ್ ಚವ್ಹಾಣ, ಲಖನಸಿಂಗ್ ರಜಪುತ್, ಶ್ರೀನಿವಾಸ್ ಪೆಂದು, ಟೂರ್ನಮೆಂಟ್ ಆಯೋಜಕರಾದ ಪಾಂಡು ರಾಠೋಡ, ದೇವಿದಾಸ್ ಚವ್ಹಾಣ, ಸಂಜು ಚವ್ಹಾಣ, ತಿರುಪತಿ ರಾಠೋಡ, ಶರವಣ ಪವಾರ, ಕಿರಣ್ ರಾಠೋಡ, ಅನಿಲ್ ಚವ್ಹಾಣ ಇದ್ದರು.



