ಪ್ರತಿಭಾ ಕಾರಂಜಿ–ಕಲೋತ್ಸವ ವಿಜೇತ ಮಕ್ಕಳು ಗೌರವ: ಕ್ಲಸ್ಟರ್ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಪ್ರಮಾಣ ಪತ್ರ ವಿತರಣೆ

ಕಲಬುರಗಿ: ನಗರದ ಗಂಜ ಪ್ರದೇಶದ ಖಾಜಾ ಕಾಲನಿಯಲ್ಲಿರುವ ಕ್ಲಸ್ಟರ್ ಆದರ್ಶ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ವಿದ್ಯಾರ್ಥಿಗಳ ಪ್ರತಿಭೆ, ಕಲೆ, ಸಂಸ್ಕೃತಿ ಹಾಗೂ ಶೈಕ್ಷಣಿಕ ತಾಕತ್ತನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಲವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಶಾಂತಾಬಾಯಿ ಬಿರಾದಾರ್, ಬಿಆರ್‌ಪಿ ತನುಜಾ ಜೋಶಿ, ಸಿಆರ್‌ಪಿ ಅನಿತಾ ಕರ್, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು—ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಪ್ರೇಮ್ ಸಿಂಗ್ ಚೌವ್ಹಾಣ, ಶಿವಾನಂದ ಸಂಘಾರ್, ಮಹಾನಂದ ಹುಲಿ, ಶಾಂತಾಬಾಯಿ ಮಸೂತಿ, ಸೌಮ್ಯ ಕುಲಕರ್ಣಿ, ಲಕ್ಷ್ಮಣ, ಲಕ್ಷ್ಮಿ ಪಾಟೀಲ್, ರೇವಣಸಿದ್ದಪ್ಪ ಮಸೂತಿ, ಸೋಮಶೇಖರ್ ಜೆ ಸೇರಿದಂತೆ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಬಿಆರ್‌ಪಿ–ಸಿಆರ್‌ಪಿ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.
ಅತಿಥಿಗಳು ಪಾಲ್ಗೊಂಡ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ, ಅವರ ಕಲಾ-ಕೌಶಲ್ಯ ಹಾಗೂ ಪಾಠ್ಯೇತರ ಚಟುವಟಿಕೆಗಳ ಉತ್ತೇಜನಕ್ಕಾಗಿ ಶಾಲೆಯ ಪ್ರಯತ್ನವನ್ನು ಶ್ಲಾಘಿಸಿದರು. ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕ–ಶಿಕ್ಷಕಿಯರು ಯಶಸ್ವಿಯಾಗಿ ನೆರವೇರಿಸಿದರು.



