ಮಹಾಲಕ್ಷ್ಮೀದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭಕ್ತಿಭಾವದಿಂದ ನೆರವೇರಿತು

ಕಲಬುರಗಿ:ಕುವೇಂಪು ನಗರ ಮತ್ತು ಕಲ್ಯಾಣ ನಗರಗಳಲ್ಲಿ ಮಹಾಲಕ್ಷ್ಮೀದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮ.ನಿ.ಪ್ರ ಚರಲಿಂಗ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಭಕ್ತಿಭಾವಪೂರ್ಣವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಭಿಷೇಕ್ ಪಾಟೀಲ, ನೀಲಕಂಠರಾವ ಮೂಲಗೆ, ರಾಜೀವ್ ಜಾನೆ, ಮಾಜಿ ಮೇಯರ್ ವಿಶಾಲ ದರ್ಗಿ, ರುದ್ರಶೇಟ್ಟಿ ಕಲ್ಯಾಣಿ, ಮಂಜುನಾಥ ಜೇವರ್ಗಿ (ವಕೀಲರು), ರಾಜಶೇಖರ ಪಾಟೀಲ (ಅಪ್ಪಾಜಿ), ಶಿವರಾಜ ನೀಲಾ (ನ್ಯಾಯವಾದಿಗಳು), ಮಲ್ಲಿಕಾರ್ಜುನ ಭೋತಗಿ, ಹಾಗೂ ಬಡಾವಣೆ ಮುಖಂಡರಾದ ಜಗನ್ನಾಥ ಶೇಗಜಿ, ಬಾಬುರಾವ ಪವಾರ, ಬಸವಣ್ಣಪ್ಪಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಎಚ್.ಕೆ. ಕುನ್ನೂರ, ಸುಭಾಸ ನಾಯಕವಾಡ, ವಿಠ್ಠಲ್ ಬಿರಾದಾರ, ಚಂದ್ರಶೇಖರ ಪಾಟೀಲ, ಶಿವಕುಮಾರ ಬೆಳಕೇರಿ, ಅನ್ಣಾರಾಯ ಕುದರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಕಾರ್ಯಕ್ರಮದಲ್ಲಿ ಶಿವರಾಮ ರಾಠೋಡ, ಸಿದ್ದು ಗಡಂತಿ, ದಿವಾಕರ, ರೇವಣಸಿದ್ದಪ್ಪ ಮೂಲಗೆ, ಮಹಿಳಾ ಭಕ್ತಾದಿಗಳಾದ ಸುನೀತಾ ಝಳಕಿಕರ್, ಶರಣಮ್ಮ ಶೇಗಜಿ, ಶಾಂತಾಬಾಯಿ, ರುಕ್ಮೀಣಿ ಬಿರಾದಾರ, ಇಂದುಕಲಾ ಕುನ್ನೂರ, ಬಸಮ್ಮ ಪಾಟೀಲ, ಭೀಮಬಾಯಿ ಪಾಟೀಲ, ದಸ್ಮಾಬಾಯಿ ರಾಠೋಡ, ಆಶಾಬಾಯಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ಪೂಜಾ ವೈಭವಕ್ಕೆ ಸಾಕ್ಷಿಯಾದರು.
ಮಠಾಧೀಶರು, ರಾಜಕೀಯ ಮುಖಂಡರು ಮತ್ತು ಭಕ್ತಾಧಿಕಾರಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಅತ್ಯಂತ ಭಕ್ತಿಭಾವ, ಪೂರ್ಣ ಶ್ರದ್ಧೆ ಹಾಗೂ ವೈಭವದಿಂದ ಜರುಗಿತು.



