ಡಾ. ಎಸ್.ಎಚ್. ಕಟ್ಟಿ ಅವರ 88ನೇ ಜನ್ಮದಿನ ಆಚರಣೆ – ವೃದ್ಧಾಶ್ರಮದ ಹಿರಿಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ: ಕುಖ್ಯಾತ ಕ್ಷಯರೋಗ ತಜ್ಞರು ಹಾಗೂ ನಿವೃತ್ತ ವೈದ್ಯಾಧಿಕಾರಿಯಾದ ಡಾ. ಎಸ್.ಎಚ್. ಕಟ್ಟಿ ಅವರ 88ನೇ ಜನ್ಮದಿನವನ್ನು ಕರ್ನಾಟಕ ಸಮತಾ ಸೈನಿಕದಳ (ಕೆಎಸ್‌ಎಸ್‌ಡಿ) ಜಿಲ್ಲಾ ಸಮಿತಿ, ಜಿಲ್ಲಾ ಕಾರ್ಮಿಕ ಘಟಕ ಹಾಗೂ ಕೆಎಸ್‌ಎಸ್‌ಡಿ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ. ಮಾಲೆ ಅವರ ನೇತೃತ್ವದಲ್ಲಿ ಸೇವಾಧರ್ಮದ ಮೂಲಕ ಸಾರ್ಥಕಗೊಳಿಸಲಾಯಿತು.
ನಗರದ ಹೊರವಲಯ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿತಾಯಿ ಮಹಿಳಾ ವಿದ್ಯಾ ವರ್ಧಕ ಸಂಘದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ಜೀವಿಗಳಿಗೆ ಹಣ್ಣು–ಹಂಪಲು ವಿತರಿಸುವ ಮೂಲಕ ವಿಶಿಷ್ಟವಾಗಿ ಜನ್ಮದಿನ ಆಚರಣೆ ನೆರವೇರಿಸಲಾಯಿತು.
ಹುಮನಾಬಾದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜ್ ಅರಸ್, ಬಸವಲಿಂಗಪ್ಪ ಅಲ್ದಾಳ, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಡಾ. ಕಟ್ಟಿ ಅವರ ವೈದ್ಯಕೀಯ ಸೇವೆ, ಮಾನವೀಯತೆ ಹಾಗೂ ಸಮಾಜಮುಖಿ ಕೊಡುಗೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಅವಿನಾಶ್ ದೊಡ್ಡಮನಿ, ವೃದ್ಧಾಶ್ರಮ ಸಿಬ್ಬಂದಿಗಳಾದ ಸಂಗೀತಾ, ಭೂಮಿಕಾ, ಕೆಎಸ್‌ಎಸ್‌ಡಿ ಕಾರ್ಮಿಕ ಘಟಕ ಅಧ್ಯಕ್ಷ ವಿಜಯಕುಮಾರ ಉದ್ದಾ, ಮಲ್ಲಿಕಾರ್ಜುನ ಉದಯಕರ್, ಶರಣು ಮುದ್ನಾಳ, ಮಹಾದೇವ ನಾಟಿಕರ್, ಮಿಲಿಂದ ಕಣಮಸ್, ಕೆಎಸ್‌ಎಸ್‌ಡಿ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ್ ಭಾವಿಮನಿ, ಅನೇಕ ಸಮಾಜಸೇವಕರು ಹಾಗೂ ವಕೀಲರು ಉಪಸ್ಥಿತರಿದ್ದರು.



