ಚಿತ್ರ ಸುದ್ದಿಜಿಲ್ಲಾಸುದ್ದಿ
ಸಿಐಬಿ ಕಾಲೋನಿಯಲ್ಲಿ ₹10 ಲಕ್ಷ ವೆಚ್ಚದ ಮಳೆನೀರು ಚರಂಡಿ ಕಾಮಗಾರಿಗೆ ಚಾಲನೆ

ಕಲಬುರಗಿ:ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 43ರಲ್ಲಿರುವ ಸಿಐಬಿ ಕಾಲೋನಿಯಲ್ಲಿ 15ನೇ ಹಣಕಾಸು ಯೋಜನೆಯಡಿ ₹10 ಲಕ್ಷ ವೆಚ್ಚದ ಮಳೆನೀರು ಚರಂಡಿ ಕಾಮಗಾರಿಗೆ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ್ ಜಾನೆ ಅವರು ಭಾನುವಾರ ಚಾಲನೆ ನೀಡಿದರು.
ಈ ಕಾಮಗಾರಿ ಪೂರ್ಣಗೊಂಡ ಬಳಿಕ ಮಳೆಗಾಲದಲ್ಲಿ ಉಂಟಾಗುತ್ತಿದ್ದ ನೀರು ನಿಲ್ಲುವ ಸಮಸ್ಯೆ ಪರಿಹಾರವಾಗಲಿದೆ ಹಾಗೂ ಕಾಲೋನಿಯ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಮೇಯರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಡಾವಣೆ ಮುಖಂಡರಾದ ಬಾಬುರಾವ್ ಜಮಾದಾರ್, ರೇಷ್ಮಾ, ಕಸ್ತೂರಿ, ಇಂಜಿನಿಯರ್ ಶಿವಾನಂದ್, ನರಸಪ್ಪ ಗುತ್ತೇದಾರ್ ಸೇರಿದಂತೆ ಕಾಲೋನಿಯ ನಿವಾಸಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.



