ಕಲಬುರಗಿಜಿಲ್ಲಾಸುದ್ದಿ

MLC ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ನಿಂದಿಸಿರುವ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ ಕ್ರಮಕ್ಕೆ ಒತ್ತಾಯ

ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರಿಗೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮುಖಾಂತರ ನಿಂದಿಸಿರುವವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ತಾಲೂಕು ಯುವ ಕೋಲಿ ಸಮಾಜದ ಅಧ್ಯಕ್ಷ ಮಹೇಶ್ ಸಾತನೂರ ಒತ್ತಾಯಿಸಿದರು.

ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ -೨ ತಹಸಿಲ್ದಾರ್ ರಾಜಕುಮಾರ್ ಮರತೂರ್ ರವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಇತ್ತಿಚೇಗೆ ಕೆಲವರು ಸಾಮಾಜಿಕ ಜಾಲತಾಣದ ಮುಖಾಂತರ ಕೋಲಿ ಸಮಾಜದ ಮುಖಂಡ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ನಿಂದಿಸಿದ್ದಾರೆ.

ಕಮಕನೂರ ಸಾಮಾಜಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಲಿ ಸಮಾಜದ ಬಗ್ಗೆ ಅಪಾರ ಕಾಳಜಿ ಹಾಗೂ ಯಾವುದೇ ಒಂದು ಕಲ್ಮಶವಿಲ್ಲದ ವ್ಯಕ್ತಿಯಾಗಿದ್ದಾರೆ. ದಿವಂಗತ ವಿಠಲ ಹೇರೂರು ಅವರಂತಹ ಸಮಾಜ ದೋಣಿಯನ್ನು ತಿಪ್ಪಣ್ಣಪ್ಪ ಕಮಕನೂರ್ ಅವರು ಮುನ್ನಡೆಸಿಕೊಂಡು ಹೋಗುತ್ತಿರುವ ಏಕೈಕ ನಾಯಕರಾಗಿದ್ದಾರೆ. ತಮ್ಮ ಸ್ಥಾನಮಾನ ಲೆಕ್ಕಿಸದೆ ಅನೇಕ ಬಾರಿ ಸಮಾಜದ ಪರವಾಗಿ ಧ್ವನಿಯೆತ್ತಿದ್ದಾರೆ.

ಸಮಾಜದ ಪರವಾಗಿ ಹಲವು ಬಾರಿ ವಿಧಾನ ಪರಿಷತನಲ್ಲಿ ಸಮಾಜದ ಪರವಾಗಿ ಮಾತನಾಡಿದ್ದಾರೆ. ಇಂಥ ನಾಯಕರ ಬಗ್ಗೆ ಕೆಲವೊಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ನಿಂದನೆ ಮಾಡುತ್ತಿರುವಂತಹ ಅವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಸಮಾಜದ ಪ್ರಮುಖರಾದ ಶೇಖಪ್ಪ ಆಲೂರ, ಅಂಬು ಹೊಳ್ಳಿಕಟ್ಟಿ, ರಮೇಶ್ ವಾಡಿ, ಗಣೇಶ್ ಚವ್ಹಾಣ, ಗುರುನಾಥ ಅಲ್ಲೂರ್, ಸಂತೋಷ ನರಬೋಳಿ, ತಿಪ್ಪಣ್ಣ ಇವಣಿ, ರಾಜು ಕರದಾಳ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button