ಕೋಲಿ ಸಮಾಜ ಒಗ್ಗೂಡಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ: ಸಾಲಿ

ಚಿತ್ತಾಪುರ: ಜನೆವರಿ 21ರಂದು ತಾಲೂಕು ಆಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವದು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಹಾಗೂ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಅಂಬಿಗರ ಚೌಡಯ್ಯ ಭವನದಲ್ಲಿ ಜಯಂತಿ ಪ್ರಯುಕ್ತ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರುಜ.21 ರಂದು ಬೆಳಿಗ್ಗೆ 10 ಲಾಡ್ಡಿಂಗ್ ಕ್ರಾಸ್ ಬಳಿ ಚೌಡಯ್ಯ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿ ಮೆರವಣಿಗೆ ಮೂಲಕ ಆಗಮಿಸಿ ತಾಲೂಕು ಆಡಳಿತದಿಂದ ಆಚರಸಲಾಗುವ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಮತ್ತು ತಾಲೂಕಿನ ಎಲ್ಲಾ ಗ್ರಾಮಗಳಿಂದಕೋಲಿಸಮಾಜದವರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಕೋಲಿ, ಕಬ್ಬಲಿಗ ಸೇರಿದಂತೆ ಇನ್ನುಳಿದ ಪರ್ಯಾಯ ಪದಗಳನ್ನು ಎಸ್.ಟಿ ಸಮಾ ಜಕ್ಕೆ ಸೇರಿಸಲು ಒತ್ತಾಯಿಸಿ ಚಿತ್ತಾಪುರದಲ್ಲಿ ಮುಂದಿನ ದಿನಗಳಲ್ಲಿ ಸಮಾವೇಶ ಹಮ್ಮಿಕೊ ಳ್ಳಲಾಗುವದು. ಈ ಸಮಾವೇಶಕ್ಕೆ ರಾಜ್ಯ, ಜಿಲ್ಲೆ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪುರ, ನಿಂಗಣ್ಣ ಹೆಗಲೇರಿ, ಮುಖಂಡರಾದ ಹಣಮಂತ ಸಂಕನೂರ, ಸುರೇಶ ಬೆನಕನಹಳ್ಳಿ, ಗುಂಡು ಐನಾಪುರ, ಮಲ್ಲಿಕಾರ್ಜುನ ಅಲ್ಲೂರ ಲಕ್ಷ್ಮಿ ಕಾಂತ ಸಾಲಿ, ರಾಜು ಹೊಳಿಕಟ್ಟಿ, ಪ್ರಭು ಹಲಕಟ್ಟಿ, ಸಾಬಣ್ಣ ಭರಾಟೆ ಇದ್ದರು.



