ಶ್ರೀ ಗುರು ಸ್ವತಂತ್ರ ವಿಜ್ಞಾನ ಪಿಯು ಕಾಲೇಜು ಪ್ರವೇಶ ಸಿಇಟಿ: 2681 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

ನಮ್ಮ ಶಿಕ್ಷಣ ಸಂಸ್ಥೆ ಶ್ರೀ ಗುರು ಕಾಲೇಜು ಇಷ್ಟೊಂದು ಜನಪ್ರಿಯತೆಗೆ ನಮ್ಮ ತಂದೆಯವರ ಶಿಸ್ತು ಮತ್ತು ಪರಿಶ್ರಮ ಜೊತೆಗೆ ನುರಿತ ಅನುಭವಿ ಶಿಕ್ಷಕರು ಇರುವುದರಿಂದ ಈ ಸಂಸ್ಥೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. – ಶ್ರೀ ನಿತಿನ್ ಎ ನಾಯ್ಕ್, ಕಾರ್ಯದರ್ಶಿಗಳು ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ಕಲಬುರಗಿ.
ಕಲಬುರಗಿ: ನಗರದ ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಪ್ರವೇಶಕ್ಕಾಗಿ ಸಿಇಟಿ ಮಾದರಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಪರೀಕ್ಷೆಗೆ ಸಿಬಿಎಸ್ಸಿ, ಐಸಿಎಸ್ಇ, ಎಸ್ಎಸ್ಎಲ್ಸಿ ಸೇರಿದಂತೆ ವಿವಿಧ ಮಂಡಳಿಗಳ ಸುಮಾರು 2,681 ವಿದ್ಯಾರ್ಥಿಗಳು ಹಾಜರಾದರು.
ಪರೀಕ್ಷೆ ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಿತು. ವಿದ್ಯಾರ್ಥಿಗಳೊಂದಿಗೆ ಪಾಲಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. 2002ರಲ್ಲಿ ದಿವಂಗತ ಪ್ರೊ. ಎ.ವೈ. ನಾಯ್ಕ್ ಅವರಿಂದ ಸ್ಥಾಪಿತವಾದ ಈ ಶಿಕ್ಷಣ ಸಂಸ್ಥೆ ಶಿಸ್ತು, ಪರಿಶ್ರಮ ಹಾಗೂ ಅನುಭವಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖ್ಯಾತಿ ಪಡೆದಿದೆ.
ಪ್ರಾರಂಭದಲ್ಲಿ 80 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಸಂಸ್ಥೆ, ಈಗ ಪ್ರಥಮ ಪಿಯುಸಿಯಲ್ಲಿ 9 ವಿಭಾಗಗಳು ಮತ್ತು ದ್ವಿತೀಯ ಪಿಯುಸಿಯಲ್ಲಿ 9 ವಿಭಾಗಗಳೊಂದಿಗೆ ಒಟ್ಟು 18 ವಿಭಾಗಗಳನ್ನು ಹೊಂದಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳು ನೀಟ್, ಕೆಸಿಇಟಿ, ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಗಳಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ.
ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಅಧ್ಯಯನದತ್ತ ಆಸಕ್ತಿ ಬೆಳೆಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಂಸ್ಥೆಯ ಕಾರ್ಯದರ್ಶಿ ನಿತಿನ್ ಎ. ನಾಯ್ಕ್ ಅವರು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ನಿರಂತರ ಗಮನ ಹರಿಸುತ್ತಿದ್ದಾರೆ. ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ನೇಹಾ ಎನ್. ನಾಯ್ಕ್ ಅವರು ವಿದ್ಯಾರ್ಥಿಗಳ, ವಿಶೇಷವಾಗಿ ವಿದ್ಯಾರ್ಥಿನಿಯರ ಶಿಸ್ತು ಹಾಗೂ ಕಲ್ಯಾಣದ ಕಡೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಸಂಸ್ಥೆ ಪಾಲಕರು ಮತ್ತು ವಿದ್ಯಾರ್ಥಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನಳಿನಿ ಎ. ನಾಯ್ಕ್, ಪ್ರಾಂಶುಪಾಲ ವಿದ್ಯಾಸಾಗರ್ ಗೋಗಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಡಾ. ಶಂಕರ ಬಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ವಿದ್ಯಾ ಸಂಸ್ಥೆ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶ ಮೊದಲು ಹೊಂದಿದೆ ಒಳ್ಳೆ ಶಿಕ್ಷಕರ ಗುಂಪು ನಮ್ಮ ಜೊತೆಗಿದೆ ಹೀಗಾಗಿ ಪಾಲಕರ ಮತ್ತು ಮಕ್ಕಳ ಮೊದಲ ಆದ್ಯತೆ ಶ್ರೀ ಗುರು ಕಾಲೇಜಿನ ಕಡೆ ಮಹತ್ವ ಕೊಡುತ್ತಾರೆ. – ಶ್ರೀಮತಿ ನೇಹಾ ಎನ್ ನಾಯ್ಕ್ ,ಆಡಳಿತ ಅಧಿಕಾರಿಗಳು ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ಕಲಬುರ್ಗಿ,



