ಜಿಲ್ಲಾಸುದ್ದಿ

ಜಗತ್ತಿನ ಶಾಂತಿ ಬುದ್ಧ: ನಿಜಲಿಂಗ ದೊಡ್ಮನಿ

ಜೇವರ್ಗಿ : ಜಗತ್ತಿನಲ್ಲಿ ನುಡಿದಂತೆ ನಡೆದು ಶಾಂತಿಯುತವಾದ ದಮ್ಮವನ್ನು ಸ್ಥಾಪಿಸಿದ ಕೀರ್ತಿ ಗೌತಮ ಬುದ್ಧರಿಗೆ ಸಲ್ಲುತ್ತದೆ. ಬುದ್ಧನ ತತ್ವಗಳು ಇಂದಿಗೂ ಆದರ್ಶವಾಗಿವೆ ಎಂದು ಉಪನ್ಯಾಸಕ ನಿಜಲಿಂಗ ದೊಡ್ಡಮನಿ ಹೇಳಿದರು.

ಹುಣ್ಣಿಮೆಯ ನಿಮಿತ್ಯ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೌತಮ ಬುದ್ಧರು ಹುಣ್ಣಿಮೆ ದಿನವನ್ನು ಕತ್ತಲಿನಿಂದ ಬೆಳಕಿನೆಡೆಗೆ ಎಂದು ಭಾವಿಸಿದ್ದರು. ಜನರಿಗೆ ಅಂಧಕಾರದಿAದ ವೈಚಾರಿಕತೆಯ ಕಡೆಗೆ ಸೆಳೆಯಲು ಜನರನ್ನು ಜಾಗ್ರತಗೊಳಿಸಿದರು. ಗೌತಮ ಬುದ್ಧರು ಭೋದಿಸಿದ ಉಪದೇಶಗಳು ಜಗತ್ತಿನಲ್ಲಿ ಜನರಿಗೆ ದಾರಿದೀಪವಾಗಿವೆ ಎಂದರು.

ಜಗತ್ತಿನ ಬಹುದೊಡ್ಡ ಮೇಧಾವಿಗಳು ಬೌದ್ಧ ಧರ್ಮದ ಅನುಯಾಯಿಗಳಗಿದ್ದಾರೆ. ಶಾಂತಿ, ನೆಮ್ಮದಿ, ಪ್ರಾರ್ಥನೆಗಳ ಮೂಲಕ ಮನುಷ್ಯನಲ್ಲಿರುವ ಕೆಟ್ಟ ಅಲೋಚನೆಗಳು ಕಳೆದುಕೊಳ್ಳಲು ಸಹಾಯಕವಾದ ದಮ್ಮ ಬೌದ್ಧ ಧರ್ಮ ಎಂದು ಹೇಳಬಹುದು.

ಜಿ.ಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ ಗಾಯಕ್ವಾಡ, ಸಿದ್ರಾಮ ಕಟ್ಟಿ, ರಾಜಶೇಖರ್ ಶಿಲ್ಪಿ, ಪ್ರಭಾಕರ್ ಸಾಗರ, ರವಿ ಕುಳಗೇರಿ, ಡಾ. ಅಶೋಕ ದೊಡ್ಡಮನಿ, ಶ್ರೀಹರಿ ಕರಕಳ್ಳಿ, ಸಿದ್ದು ಕೇರೂರ್, ಮಹೇಶ್ ಕೋಕಿಲೆ, ಯಶವಂತ ಬಡಿಗೇರ್, ಮಲ್ಲಮ್ಮ ಕೊಬ್ಬಿನ್, ಜಗದೇವಿ ಜಟ್ನಾಕರ್, ವಿಶ್ವರಾಧ್ಯ ಗವ್ಹಾರ್, ದೇವೀದ್ರ ವರ್ಮಾ , ಗುಂಡಪ್ಪ ಜಡಗಿ, ಮಾಪಣ್ಣ ಕಟ್ಟಿ, ರಾಜು ಕಟ್ಟಿಸಂಗವಿ, ಪ್ರಸನ್ನ ಸಿಂಗೆ, ದೇವೀದ್ರ ಬಡಿಗೇರ್, ಭೀಮಾಶಂಕರ ಹರನಾಳ, ಸುನಿಲ್ ಬಡಿಗೇರ್, ರವಿ ಸರಕಾರ, ಶರಣು ಕಟ್ಟಿ, ಸುರೇಶ್ ಡುಗನಕರ್, ಶಿವಕುಮಾರ್ ಸೊನ್ನ, ರಾಜು ಕಟ್ಟಿಸಂಗಾವಿ, ಶಿವಲಿಂಗ ಸಿಂಗೆ, ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button