ಕಲಬುರಗಿಜಿಲ್ಲಾಸುದ್ದಿ

ಪ್ರಶಾಂತ ಚವ್ಹಾಣ ಮೇಲೆ ಹಲ್ಲೆ – ಪತ್ರಕರ್ತರ ಸಂಘದ ಖಂಡನೆ, ಕಠಿಣ ಕ್ರಮಕ್ಕೆ ಆಗ್ರಹ

ಜೇವರ್ಗಿ: ಯಡ್ರಾಮಿ ತಾಲೂಕಿನ ಕನ್ನಡಪ್ರಭ ದಿನಪತ್ರಿಕೆಯ ವರದಿಗಾರ ಪ್ರಶಾಂತ ಚವ್ಹಾಣ ಅವರ ಮೇಲೆ ನಡೆದ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಗುರುವಾರ ಬೆಳಿಗ್ಗೆ ಸಂಘದ ಪ್ರತಿನಿಧಿಗಳು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಹಲ್ಲೆ ನಡೆಸಿದ ಕೀಡುಕೋರರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬುಧವಾರ ತಡರಾತ್ರಿ ನಡೆದ ಈ ಹಲ್ಲೆ ಮಾರಣಾಂತಿಕ ಪ್ರಯತ್ನ ಎಂದು ಸಂಘವು ಹೇಳಿದ್ದು, 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಪತ್ರಕರ್ತರ ಸುರಕ್ಷತೆ ಕಾಯುವುದಕ್ಕಾಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಆಲೂರು, ಗೌರವಾಧ್ಯಕ್ಷ ಪ್ರಕಾಶ ಆಲಬಾಳ, ರವೀಂದ್ರ ವಕೀಲ, ವಿಜಯಕುಮಾರ ಕಲ್ಲಾ, ಶರಣಪ್ಪ ನೆರಡಗಿ, ರಾಜು ಮುದ್ದಡಗಿ, ಮೊಹ್ಮದ್ ಗೌಸ್ ಇನಾಮ್ದಾರ್, ಶರಣಪ್ಪ ಬಡಿಗೇರ್, ನಾಗರಾಜ ಶಹಾಬಾದಕರ್, ಸಿದ್ದು ಕಾಮನಕೆರಿ, ಲಕ್ಷ್ಮಿಕಾಂತ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button