ಕಲಬುರಗಿಜಿಲ್ಲಾಸುದ್ದಿ

ಶಿಕ್ಷಕರ ದಿನಾಚರಣೆ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

ಡಾ. ರಾಜಕುಮಾರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಲಾ ಸಂಘದಿಂದ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ

ಕಲಬುರಗಿ: ನಗರದ ಎಸ್.ಎಂ.ಪಾಡಿತ ರಂಗಮಂದಿರದಲ್ಲಿ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಲಾ ಸಂಘ (ರಿ) ರಾಜಾಪೂರ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಂಗಾ ಪರಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಹಾಗೂ ಖ್ಯಾತ ಉದ್ಯಮಶ್ರೀ ಶ್ರೀಮತಿ ಅಮರೇಶ್ವರಿ ಬಾಬುರಾವ್ ಚಿಂಚನಸೂರ ಅವರು, “ವಿದ್ಯಾದೇವತೆ ಶಾರದೆಯನ್ನು ಶ್ರದ್ದೆಯಿಂದ ಪೂಜಿಸಿ ಕಷ್ಟಪಟ್ಟು ಓದುತ್ತಾರೋ ಅವರು ಜೀವನದಲ್ಲಿ ಉನ್ನತ ಮಟ್ಟದಲ್ಲಿರುತ್ತಾರೆ” ಎಂದು ಉದ್ಘಾಟನಾ ನುಡಿಗಳನ್ನು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಅವರು, “ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ನೈತಿಕ ಮೌಲ್ಯಗಳನ್ನೂ ಬೆಳೆಸಬೇಕು” ಎಂದರು. ಪ್ರಸಿದ್ಧ ವೈದ್ಯ ಡಾ. ಫಾರೂಕ್ ಅಹ್ಮದ್ ಮಣುರ ಅವರು, “ವಿದ್ಯಾರ್ಥಿಗಳು ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು; ಶ್ರದ್ದೆಯಿಂದ ಓದಿದರೆ ಮಾತ್ರ ಗುರಿ ಸಾಧಿಸಲು ಸಾಧ್ಯ” ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಯಲ್ಲಾಲಿಂಗ ದಂಡಿನ್ ಅವರು, “ಶಿಕ್ಷಕರು ದೇಶದ ಆಸ್ತಿಯಂತೆ, ಗುರುವರ್ಯರನ್ನು ಸದಾ ಗೌರವಿಸಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ಶರಣಪ್ಪ ಗುಂಡಗುರ್ತಿ, ವೀರುಪಾಕ್ಷಪ್ಪ ಗಡ್ಡದ, ಡಾ. ಸುನೀಲಸುಮಾರ್ ವಂಟಿ, ಗೌತಮ್ ಬೊಮ್ಮನಳ್ಳಿ, ಶರಣಬಸಪ್ಪ ಪರಮಗೊಂಡ ಚಿಮ್ಮಾದಲ್ಲಾಯಿ, ಡಾ. ವಿಜಯಕುಮಾರ್ ಗೋತಗಿ, ಅಶೋಕ್ ಕಾಳೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಗೀತಾ ರಸಮಂಜರಿ ಕಾರ್ಯಕ್ರಮವು ಭರ್ಜರಿ ಆಯೋಜನೆಯೊಂದಿಗೆ ನಡೆಯಿತು.

ಸಂಘದ ಅಧ್ಯಕ್ಷ ಪ್ರೊ. ರಮೇಶ್.ಬಿ.ಯಾಳಗಿ ಅವರು ಪ್ರಾಸ್ತಾವಿಕವಾಗಿ ಅಧ್ಯಕ್ಷರ ನುಡಿಗಳನ್ನು ಹಂಚಿಕೊಂಡರು. ಸಂಚಾಲಕರಾಗಿ ಅಶೋಕ ಉಪ್ಪಿನ ಶರಣು ತೇಗಲತಿಪ್ಪಿ ಕಾರ್ಯ ನಿರ್ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button