ವಕೀಲ ರಾಕೇಶ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ : ಶ್ರೀಕುಮಾರ ಕಟ್ಟಿಮನಿ

ಜೇವರ್ಗಿ: ಭಾರತ ಸಂವಿಧಾನದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ನ 52ನೇ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ ನಡೆದ ಈ ಘಟನೆ ಖಂಡನಿಯವಾದದ್ದು. ಮತಾಂಧ ಮನಸ್ಥಿತಿಯ ವಕೀಲ ಕಿಶೋರ ರಾಕೇಶ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮಹಾನಾಯಕ ಜನಪರ ವೇದಿಕೆ ಕಲಬುರ್ಗಿ ಜಿಲ್ಲಾ ಸಮಿತಿಯು ಮುಖಂಡ ಶ್ರೀಕುಮಾರ ಕಟ್ಟಿಮನಿ ಪತ್ರಿಕಾ ಪ್ರಕಠಣೆಯ ಮುಲಖ ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಯವರು ಧಮ್ಮ ಮಾರ್ಗದಲ್ಲಿ ನಡೆಯುತ್ತಿರುವ ಪ್ರಭಲ ಡಾ. ಅಂಬೇಡ್ಕರ್ ಅನುಯಾಯಿಯಾಗಿದ್ದು ಮುಖ್ಯ ನ್ಯಾಯಮೂರ್ತಿ ಯಾಗಿ ಪ್ರಮಾಣ ವಚನ ಸ್ವೀಕರಿಸಿಸುವ ಸಂದರ್ಭದಲ್ಲಿ ನಾನು ಈ ಮಟ್ಟಕ್ಕೆ ಬೆಳೆಯಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ಪಡೆದ ಶಿಕ್ಷಣ ಕಾರಣ ಎಂದು ಪ್ರಭಲವಾಗಿ ಪ್ರತಿಪಾದಿಸಿದ್ದರು. ಇದನ್ನು ಮನುವಾದಿ ಮನಸ್ಥಿತಿಯ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಭಾರಿಗೆ ಕೇವಲ 6 ತಿಂಗಳ ಕಾಲ ಅಷ್ಟೇ ಸಿ ಜೆ ಐ ಆಗುತ್ತಿರುವುದಕ್ಕೆ ಮನವಾದಿಗಳು ಇಷ್ಟೊಂದು ವಿಷ ಖಾರುತ್ತಿರುವುದು ದುರದೃಷ್ಟಕರ. ಇದು ಸಂಪೂರ್ಣ ದೇಶದ್ರೋಹ ಕೃತ್ಯವಾಗಿದ್ದು, ಅವನಿಗೆ ಕಠಿಣ ಶಿಕ್ಷೆ ಕೊಡುವ ಮುಲಕ ಜಾತಿವಾದಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಾನಾಯಕ ಜನಪರ ವೇದಿಕೆಯ ಜಿಲ್ಲಾ ಅದ್ಯಕ್ಷ ನಾಗೇಶ ಎಂ ಕೊಳ್ಳಿ ಪ್ರಧಾನ ಕಾರ್ಯದರ್ಶಿ ಶ್ರೀಕುಮಾರ್ ಕಟ್ಟಿಮನಿ, ಜೇವರ್ಗಿ ತಾಲೂಕಾದ್ಯಕ್ಷ ವಿಶ್ವರಾದ್ಯ ಬಡಿಗೇರ್ ಪತ್ರಿಕಾ ಪ್ರಕಠಣೆಯ ಮೂಲಕ ಆಗ್ರಹಿದ್ದಾರೆ.