ಮಹೇಶ್ ಸಿ. ಹುಬ್ಬಳ್ಳಿ ನೇತೃತ್ವದಲ್ಲಿ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ–ಸಾಧಕರಿಗೆ ಸನ್ಮಾನ

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ/ಸರ್ಕಾರಿ/ಅರೆ ಸರ್ಕಾರಿ/ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ನೌಕರರ ಸಂಘ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ವತಿಯಿಂದ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರಾಜ್ಯಾಧ್ಯಕ್ಷ ಮಹೇಶ್ ಸಿ. ಹುಬ್ಬಳ್ಳಿ ಅವರ ನೇತೃತ್ವದಲ್ಲಿ ಭವ್ಯವಾಗಿ ಜರುಗಿತು.
ಕಾರ್ಯಕ್ರಮದ ಆರಂಭವನ್ನು ಗಜೇಂದ್ರ ಮಿಂಚಾ ಪ್ರಾರ್ಥನಾ ಗೀತೆಯಿಂದ ನಡೆಸಿಕೊಟ್ಟರು. ಮಲ್ಲಿಕಾರ್ಜುನ್ ಹಲಗೇರಾ, ಡಾ. ಅಂಬಾರಾಯ ರುದ್ರವಾಡಿ, ಡಾ. ಶರಣಬಸಪ್ಪ ಖ್ಯಾತನಾಳ ಮತ್ತು ಸ್ವಾತಿ ದರ್ಗಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂವಿಧಾನ ಪೀಠಿಕೆ ವಾಚನವನ್ನು ವಿದ್ಯಾಧರ್ ಕಾಂಬಳೆ ನಡೆಸಿ, ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು. ಸಂಘಟನೆ ನಡೆದು ಬಂದ ದಾರಿಯನ್ನು ವಿಠ್ಠಲ್ ಗೋಳಾ ವಿವರಿಸಿದರು.
“ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಅದನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ—ಬಾಬಾ ಸಾಹೇಬರ ಮೂರು ಮಂತ್ರಗಳು ಸಮಾಜ ಪರಿವರ್ತನೆಗೆ ದಾರಿ”
ಎಂದು ಕರೆ ನೀಡಿದರು.- ರಮೇಶ್ ಮಾಡ್ಯಾಳ್ಕರ್,
ಡಾ. ರುದ್ರವಾಡಿ ಸಂವಿಧಾನದ ಮಹತ್ವವನ್ನು ಸರಳ ಶೈಲಿಯಲ್ಲಿ ವಿವರಿಸಿದರು. ಸಂವಿಧಾನದ ಕಿರು ಪುಸ್ತಕವನ್ನು ಡಾ. ಶರಣಬಸಪ್ಪ ಖ್ಯಾತನಾಳ, ರವಿಕಾಂತಿ ಹಾಗೂ ಗಣ್ಯರು ಬಿಡುಗಡೆಯಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ–ವಿದ್ಯಾರ್ಥಿನಿಗಳಿಗಾಗಿ ರಸಪ್ರಶ್ನೆ,ಪ್ರಬಂಧ,ಭಾಷಣ,ಗಾಯನ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಸನ್ಮಾನ ಮಾಡಲಾಯಿತು.
ಬಾಬಾ ಸಾಹೇಬರ ಜೀವನ, ಹೋರಾಟ ಮತ್ತು ವಿಚಾರಧಾರೆಯನ್ನು ವಿದ್ಯಾಧರ ಕಾಂಬಳೆ ಏಕಪಾತ್ರಾಭಿನಯದ ರೂಪದಲ್ಲಿ ಪ್ರಭಾವಿಯಾಗಿ ಮೂಡಿಸಿದರು.
“ಸಂವಿಧಾನ ಜಾಗೃತಿ ಪ್ರತಿಯೊಬ್ಬರಿಗೆ ಹರಡಬೇಕು. ಹಕ್ಕು–ಕರ್ತವ್ಯಗಳ ಅರಿವು ಬಂದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ” ರಾಜ್ಯಾಧ್ಯಕ್ಷ ಮಹೇಶ್ ಹುಬ್ಬಳ್ಳಿ ಎಂದು ಹೇಳಿದರು.
ಕಾರ್ಯಕ್ರಮವನ್ನು ಡಾ. ಮಾರುತಿ ಬೇಂದ್ರೆ ನಿರೂಪಿಸಿದರು. ಕಾಶಿನಾಥ್ ಮುಖರ್ಜಿ ಸ್ವಾಗತಿಸಿ, ಸುಭಾಷ ಆರ್. ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಮ್ಮ ಹುಲಿಮನಿ, ಸಂಜಯ ಕಪೂರ, ಡಾ. ಚಂದ್ರಕಾಂತ ನರಿಬೋಳ, ಡಾ. ರಾಕೇಶ್ ಕಾಂಬಳೆ ಸೇರಿದಂತೆ ಹಲವು ಹಿರಿಯ–ಕಿರಿಯ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.



