ಡಿ.11.ರಂದು ಒಳ ಮೀಸಲಾತಿಗಾಗಿ ಬೆಳಗಾವ ಚಲೋ: ಮಲ್ಲಿಕಾರ್ಜುನ ಚಿನಕೇರಿ

ಕಲಬುರಗಿ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಡಿಸೆಂಬರ್ 11ರಂದು ಬೆಳಗಾವಿಯಲ್ಲಿ ನಡೆಯುವ ಸಾಕೇಂತಿಕ ಧರಣಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕೆಂದು ಮಾದಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಚಿನಕೇರಿ ಕರೆ ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೆಳಗಾವಿ ವಿಧಾನ ಸೌಧದ ಎದುರುಗಡೆ ಎಲ್ಲರೂ ಸೇರಬೇಕು ಎಂದು ಅವರು ತಿಳಿಸಿದ್ದಾರೆ.
“ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಒಳ ಮೀಸಲಾತಿ ಹೋರಾಟ ಕೊನೆಯ ಹಂತಕ್ಕೆ ಬಂದಿದೆ. ವರ್ಷಗಳ ಹೋರಾಟದ ಫಲವನ್ನು ಸಾಧಿಸುವ ಕ್ಷಣ ಇದು. ಪ್ರತಿಯೊಬ್ಬರೂ ಮನೆ ಮನೆಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಧರಣಿಗೆ ಆಗಮಿಸಬೇಕು,” ಎಂದು ಅವರು ಮಾದಿಗ ಸಮುದಾಯದ ಬಾಂದವರಿಗೆ ಮನವಿ ಮಾಡಿದರು.
ಕಾಲಾನಂತರದ ಹೋರಾಟದ ಬಳಿಕವೂ ಸರ್ಕಾರ ಒಳ ಮೀಸಲಾತಿಯನ್ನು ಪರಿಪೂರ್ಣವಾಗಿ ಜಾರಿಗೊಳಿಸುತ್ತಿಲ್ಲ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಸಾಕೇಂತಿಕ ಧರಣಿ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಸಮಾಜದ ನಾಯಕರಿಂದ ವಿನಂತಿಸಲಾಗಿದೆ.



