ಕಲಬುರಗಿಜಿಲ್ಲಾಸುದ್ದಿ

ನ. 22ರಂದುಜಿಲ್ಲಾ ಮಟ್ಟದ ಉದ್ಯಮ–ಸ್ವಯಂ ಉದ್ಯೋಗ ಕಾರ್ಯಾಗಾರ: ಯುವಜನರಿಗೆ ಪ್ರೇರಣೆಯ ವೇದಿಕೆ

ಚಿತ್ತಾಪುರ: ಉದ್ಯಮ ಶೀಲತೆಯನ್ನು ಉತ್ತೇಜಿಸುವ ಮತ್ತು ಯುವಜನರಲ್ಲಿ ಸ್ವಯಂ ಉದ್ಯೋಗದ ಚೈತನ್ಯ ತುಂಬುವ ಉದ್ದೇಶದಿಂದ ನಾಗಾವಿ ಸೇವಾ ಪ್ರತಿಷ್ಠಾನವತಿಯಿಂದ ಉದ್ಯಮಶೀಲತಾ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ತರಬೇತಿ ಹಾಗೂ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಮತ್ತು ಜಿಲ್ಲಾ ಮಟ್ಟದ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾರ ನವೆಂಬರ್ 22 ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಜರುಗಲಿದೆ ಎಂದು ಪ್ರತಿಷ್ಠಾನದ ರಾಜು ಕುಲಕರ್ಣಿ ತಿಳಿಸಿದ್ದಾರೆ.


ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಪಿಎಂಎಫ್‌ಎ0ಇ, ಪಿಎಂಇಜಿಪಿ, ಎನ್‌ಎಲ್‌ಎಂ, ಟೆಕ್ಸ್ಟೈಲ್, ಪ್ರವಾಸೋದ್ಯಮ, ಎಫ್‌ಎಂಸಿಜಿ, ವೈದ್ಯಕೀಯ, ಕಟ್ಟಡ ನಿರ್ಮಾಣ, ಆಹಾರ, ಕೃಷಿ, ಎಎಂಐ, ಎಐಎಫ್ ಮತ್ತು ಇತರ ಕೈಗಾರಿಕಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಯುವಕರು, ಮಹಿಳೆಯರು ಹಾಗೂ ಉದ್ಯಮಾಸಕ್ತರಿಗೆ ಈ ಕಾರ್ಯಗಾರ ಪ್ರೇರಣೆಯ ವೇದಿಕೆಯಾಗಿದೆ.


ಮಾನವ ಹಕ್ಕುಗಳ ಆಯೋಗದ ಸದಸ್ಯರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಂಘಟನೆಯ ಸಂಪನ್ಮೂಲ ವ್ಯಕ್ತಿ, ಪಿಎಂಎಫ್‌ಎ0ಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಎನ್‌ಜಿಒ, ಇಡಿಪಿ, ಎಂ.ಎಸ್.ಎA.ಇ ತಜ್ಞ, ಮಾರ್ಗದರ್ಶಕ, ತರಬೇತುದಾರ ಡಾ. ಸುರೇಶ ಕಮ್ಮಾರ ಪ್ರೇರಣಾ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ.


ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದು, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ತಾಪಂ ಇಓ ಡಾ. ಬಸಲಿಂಗಪ್ಪ ಡಿಗ್ಗಿ, ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ ಕರದಾಳ, ಉದ್ಯಮಿ ಸೋಮಶೇಖರ ಪಾಟೀಲ ಬೆಳಗುಂಪಾ, ಬಸವರಾಜ ಬೇಣ್ಣೂರಕರ್, ಗೋಪಾಲ ರಾಠೋಡ್, ವೆಂಕಟಮ್ಮ ಪಾಲಪ್, ಮುಕ್ತಾರ್ ಪಟೇಲ್, ಶಾಂತಕುಮಾರ ಹತ್ತಿ, ಬಾಬು ಕಾಶಿ, ವಿನೋದ ಗುತ್ತೇದಾರ, ಗೌತಮ್ ನಾಯಕ, ಡಾ. ಮೋದಿನಸಾಬ್ ಮುಲ್ಲಾ, ಶಿವಶರಣಪ್ಪ ಸುಬೇಗಾಂವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ನಾಗಾವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಬೊಮ್ಮನಳ್ಳಿ ಅಧ್ಯಕ್ಷತೆವಹಿಸಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಗಳನ್ನು ಪ್ರತಿಷ್ಠಾನ ಸದಸ್ಯರು ಕೈಗೊಂಡಿದ್ದು, ಯುವಜನರಿಗೆ ಉದ್ಯಮದ ದಾರಿ ತೋರಿಸುವ ಮತ್ತು ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಲು ಪ್ರೇರೇಪಿಸುವ ಉದ್ದೇಶ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಕುಲಕರ್ಣಿ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button