76ನೇ ಸಂವಿಧಾನ ಸಮರ್ಪಣಾ ದಿನಾಚರಣೆ: ಸಂವಿಧಾನ ಸೇವೆಗೈದ ಮಹನೀಯರಿಗೆ ಸನ್ಮಾನ

ಕಲಬುರಗಿ:ಜಗತ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯ ಆವರಣದಲ್ಲಿ ಕರ್ನಾಟಕ ಸಮತಾ ಸೈನಿಕ ದಳ (ಕೆಎಸ್ಎಸ್ಡಿ) ಜಿಲ್ಲಾ ಸಮಿತಿ ಮತ್ತು ವಿವಿಧ ಘಟಕಗಳ ಸಂಯುಕ್ತಾಶ್ರಯದಲ್ಲಿ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಕೆಎಸ್ಎಸ್ಡಿ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ. ಮಾಲೆ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಂವಿಧಾನ ಬದ್ಧವಾಗಿ ಸಮಾಜಸೇವೆ ಮಾಡಿದ ಮಹನೀಯರಿಗೆ ಸನ್ಮಾನ ಸಲ್ಲಿಸಲಾಯಿತು.
ಅತಿಥಿಗಳಾಗಿ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಸುನಿಲಕುಮಾರ್ ಒಂಟಿ ಅವರು ಭಾಗವಹಿಸಿ ಸಂವಿಧಾನದ ಮಹತ್ವ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒತ್ತಿ ಹೇಳಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ಜಾನೆ, ಮಹಾದೇವ ನಾಟಿಕರ್, ಮಲ್ಲಿಕಾರ್ಜುನ್ ಉದಯಕರ್, ವಿಜಯಕುಮಾರ್ ಉದ್ದಾ, ಶರಣು ಮದ್ನಾಳ, ಸಿದ್ದಾರ್ಥ್ ಕಣಮಸ್, ಶರಣು ಕಡಗಂಚಿ, ಅಮೃತರಾವ್ ನಾಯ್ಕೋಡಿ, ಸವಿತಾ ಒಂಟಿ, ಸಾಹಿತಿ ಬಾಬುರಾವ್ ಕಾಂಬಳೆ, ವಿಜಯಕುಮಾರ್ ಸಾವಳಗಿ, ಶಿವಮೂರ್ತಿ ಬಳಿಚಕ್ರ, ಇಂದುಬಾಯಿ ಭರತನೂರ, ಪದ್ಮ ಅಟ್ಟುರ, ಜ್ಯೋತಿ ಎಸ್. ದರ್ಗಿ, ಕಪಿಲ್ ಜಾನೆ, ಮಲ್ಲು ನಂದೂರ್, ಕಾವೇರಿ ಗೋರಂಪಳ್ಳಿ, ಲಲಿತಾಬಾಯಿ ಬಿಲ್ಕರ್, ಉಮೇಶ್ ಪಾಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಾಹಿತಿ ಎಂ. ಎನ್. ಸುಗಂಧಿ ರಾಜಾಪೂರ ಅವರು ಸಂವಿಧಾನದ ಪೀಠಿಕೆ ಬೋಧನೆ ನಡೆಸಿ, ಸಂವಿಧಾನದ ಆತ್ಮ ಮತ್ತು ಮೌಲ್ಯಗಳನ್ನು ವಿವರಿಸಿದರು.
ಈರಣ್ಣ ಜಾನೆ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ್ ಭಾವಿಮನಿ ವಂದನೆ ಸಲ್ಲಿಸಿದರು.



