ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭವ್ಯ ಮೂರ್ತಿ ಮೆರವಣಿಗೆ

ಕಲಬುರಗಿ: ಅಂಬಿಗರ ಯುವ ಸೈನ್ಯ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಅಂಗವಾಗಿ ದಿ. 21-01-2026 ರಂದು ಸಾಯಂಕಾಲ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಗರದ ಎಸ್.ವಿ.ಪಿ. ವೃತ್ತದಿಂದ ಜಗತ್ ವೃತ್ತದವರೆಗೆ ಡೊಳ್ಳು, ಹಲಗಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಂಬಿಗರ ಯುವ ಸೈನ್ಯದ ಜಿಲ್ಲಾಧ್ಯಕ್ಷ ರಾಜು ಸೊನ್ನ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸುವರು. ಮೂರ್ತಿ ಮೆರವಣಿಗೆಗೆ ಶಾಸಕಿ ಖನಿಜ್ ಫಾತಿಮಾ ಅವರು ಚಾಲನೆ ನೀಡುವರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಅಜಯ ಸಿಂಗ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ಜಿಲ್ಲಾಧ್ಯಕ್ಷ ಚಂದು ಪಾಟೀಲ, ಕಾಂಗ್ರೆಸ್ ಮುಖಂಡರು ನೀಲಕಂಠರಾವ ಮೂಗೆ, ಫರಾಜುಲ್ ಇಸ್ಲಾಂ, ಬಿಜೆಪಿ ಮುಖಂಡ ನೀತಿನ ಗುತ್ತೇದಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೆದಾರ, ರಾಜಗೋಪಾಲ ರೆಡ್ಡಿ, ಲಚ್ಚಪ್ಪ ಜಮಾದಾರ, ಅವಣ್ಣಾ ಮ್ಯಾಕೇರಿ, ಶರಣಪ್ಪ ತಳವಾರ, ಶಿವಕುಮಾರ ನಾಟೀಕಾರ, ಮಹಾಂತೇಶ ಪಾಟೀಲ, ಶಿವಾನಂದ ಹೋನಗುಂಟಿ, ಅಂಬು ಡಿಗ್ಗಿ, ವಿಜಯಕುಮಾರ ಹದಗಲ್ಲ, ಶಂಭುಲಿಂಗ ಬಳಬಟ್ಟಿ, ಅರ್ಜುನ ಜಮಾದಾರ ಸೇರಿದಂತೆ ಸಮಾಜದ ಮುಖಂಡರು, ಯುವಕರು ಭಾಗವಹಿಸಲಿದ್ದಾರೆ ಎಂದು ರಾಜು ಸೊನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



