ಲೋಕೋಪಯೋಗಿ ಭವನದಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಹಾಗೂ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ಕಲಬುರಗಿ: ನಗರದ ಲೋಕೋಪಯೋಗಿ ಭವನ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಹೊಸ ವರ್ಷದ ಅಂಗವಾಗಿ ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರ ಸಂಘ, ಬೆಂಗಳೂರು ಜಿಲ್ಲಾ ಘಟಕ–ಕಲಬುರಗಿಯ 2025ರ ಕ್ಯಾಲೆಂಡರ್ ಅನ್ನು ಸಂಪರ್ಕ ಮತ್ತು ಕಟ್ಟಡ ಇಲಾಖೆ ಈಶಾನ ಮುಖ್ಯ ಇಂಜಿನಿಯರರಾದ ಶರಣಪ್ಪ ಸುಲುಗಂಟೆ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ವೃತ್ತ ಅಧೀಕ್ಷಕ ಅಭಿಯಂತರರಾದ ಅಮೀನ್ ಮುಕ್ತಾರ್ ಅಹಮದ್, ಸುರೇಶ್ ಶರ್ಮಾ, ಸುರೇಶ್ ಮೇದ, ಕಾರ್ಯನಿರ್ವಕ ಅಭಿಯಂತರರಾದ ರಾಹುಲ್ ಕಾಂಬಳೆ, ಸೂರ್ಯಕಾಂತ್ ಕಾರ್ಬಾರಿ, ಎಂ.ಡಿ. ಇಬ್ರಾಮ್, ಶ್ರೀಮಂತ ಬೆನ್ನೂರ್, ಶ್ರೀಮಂತ ಕೋಟೆ, ಬಸವರಾಜ, ಸಹಾಯಕ ಕಾರ್ಯನಿರ್ವಕ ಅಭಿಯಂತರರಾದ ಉಷಾರಾಣಿ ಪಾಟೀಲ್, ಜಯರಾಜ್ ಆರ್.ಎನ್., ಲೇಕ್ ಪರಶೋಧನಾಧಿಕಾರಿ ಮಂಜುಳಾ, ತಾಂತ್ರಿಕ ಸಹಾಯಕರಾದ ಅಮರನಾಥ ಧೂಳಿ, ಬಸವರಾಜ, ನಾಗರಾಜ್ ಉಪಸ್ಥಿತರಿದ್ದರು.
ಅಧೀಕ್ಷಕರಾದ ಚಕ್ರದನ್, ದೇವೇಂದ್ರಪ್ಪ, ರಾಹುಲ್ ದೇಶಮುಖ್, ಸಹಾಯಕ ಅಭಿಯಂತರರಾದ ಗಿರಿಜಾ ದೇವಿ, ಮಹಾನಂದ, ಕಿರಿಯ ಅಭಿಯಂತರರಾದ ಚಂದ್ರಶೇಖರ್ ನಾಸಿ, ಧೂಳಪ್ಪ ಹಿಂಬಾಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದಲ್ಲದೆ ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ, ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದಖಾನ, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೆಂದ್ರ, ಸಹ ಕಾರ್ಯದರ್ಶಿಗಳಾದ ಶಶಿನಾಥ ಸೊನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕಿಶನಾ ಸಿಂಗ್, ಸಂಘದ ಸಲಹೆಗಾರರಾದ ಶರಣಗೌಡ ಪಾಟೀಲ್, ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಪಾಂಡುರಂಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ ಮಜಾರ, ಸೈಯದ್ ಬಾಸು ಸೇರಿದಂತೆ ಸಿಬ್ಬಂದಿಗಳಾದ ಚಂದ್ರಕಲಾ, ಆರತಿ, ಗೌರಮ್ಮ, ಕುಂದಮ್ಮ, ಮಹಾದೇವಿ, ಜಲೀಲ್ ಮತ್ತು ಇತರರು ಉಪಸ್ಥಿತರಿದ್ದರು.
ಅಮರಶಿಲ್ಪಿ ಜಕಣಾಚಾರಿಯವರ ಶಿಲ್ಪಕಲೆಯ ಕೊಡುಗೆಗಳನ್ನು ಸ್ಮರಿಸಿ, ಅವರ ಆದರ್ಶಗಳನ್ನು ಅನುಸರಿಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.



