ಹಡಪದ ಸಮಾಜದ ಅಭಿವೃದ್ದಿ ನಿಗಮ ರಚನೆಗೆ ಸಂಭ್ರಮ!
ಹಡಪದ ಸಮಾಜದಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನೆ

ಕಲಬುರಗಿ:ಹಡಪದ ಸಮಾಜದ ಸರ್ವತೋಮುಖ ಅಭಿವೃದ್ದಿಗಾಗಿ ರಾಜ್ಯ ಸರ್ಕಾರವು ಹಡಪದ ಸಮಾಜದ ಅಭಿವೃದ್ದಿ ನಿಗಮ ಮಂಡಳಿಯನ್ನು ಘೋಷಿಸಿರುವುದರಿಂದ, ಕಲಬುರಗಿ ಜಿಲ್ಲಾ ಹಡಪದ ಸಮಾಜದ ವತಿಯಿಂದ ಭರ್ಜರಿ ಸಂಭ್ರಮಾಚರಣೆ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಚೌಕ್ ಹತ್ತಿರ ಹಡಪದ ಅಪ್ಪಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸದಸ್ಯರು ಸಂತೋಷ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತದಕಾಲೀನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಡಪದ ಸಮಾಜದ ಅಭಿವೃದ್ದಿ ನಿಗಮವನ್ನು ಘೋಷಿಸಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರ ಪ್ರಯತ್ನದಿಂದ ನಿಗಮಕ್ಕೆ ಅನುಷ್ಠಾನಾತ್ಮಕ ಆದೇಶ ಹೊರಡಿಸಿರುವುದು ಸಮಾಜದ ಜನತೆಗೆ “ದೀಪಾವಳಿಯ ಸಿಹಿ ಸುದ್ದಿ” ಎಂದು ಸಂಘದ ನಾಯಕರು ಹೇಳಿದರು.
ಹಡಪದ ಸಮಾಜದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಯಕರು ಸರ್ಕಾರದ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ನಿಗಮಕ್ಕೆ ₹100 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿದರು. ಇದರ ಮೂಲಕ ಹಡಪದ ಸಮಾಜದ ಜನತೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮುಂದುವರೆಯಬೇಕೆಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ, ಜಿಲ್ಲಾ ಕಾರ್ಯಾಧ್ಯಕ್ಷ ಎನ್. ಭಗವಂತ ಹಡಪದ ಹೊನ್ನಕಿರಣಗಿ, ಜಿಲ್ಲಾ ಪ್ರ ಕಾರ್ಯದರ್ಶಿ ರಮೇಶ್ ನೀಲೂರ, ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಬಟಗೇರಾ, ಮಹಾಂತೇಶ ಇಸ್ಲಾಂಪೂರೆ, ಶಿವಾನಂದ ಬಬಲಾದಿ, ಜಿಲ್ಲಾ ಖಜಾಂಚಿ ಆನಂದ ಖೇಳಗಿ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ, ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಹಡಪದ ಬಗದುರಿ, ಸಹ ಕಾರ್ಯದರ್ಶಿ ನಿಂಗಣ್ಣ ಯಾತನೂರ, ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ, ಸುನೀಲ್ ಕುಮಾರ್ ಹಡಪದ ಭಾಗಹಿಪ್ಪರರ್ಗಾ, ಚಂದ್ರಶೇಖರ ತೊನಸನಹಳ್ಳಿ, ಕಂಠು ಹಡಪದ ಕಲಬುರಗಿ, ಶ್ರೀಮಂತ ಹಡಪದ ಅರನೂರ, ಶಂಕರ್ ತಾವರಗೇರಾ, ರಮೇಶ್ ಹಡಪದ ಕರಾರಿ, ರಮೇಶ್ ಕವಲಗಾ, ಸಿದ್ದು ಯಳಸಂಗಿ, ಶಿವಕುಮಾರ್ ಹಡಪದ ಕಟ್ಟಿಸಂಗಾವಿ, ಅನೀಲ ಜೀವಾ, ಪರಮೇಶ್ವರ ಹಡಪದ ಕಲಬುರಗಿ, ಅಪ್ಪಣ ಬಿದ್ದಾಪೂರ, ಸುದೀಪ್ ಹಡಪದ ಸೇರಿದಂತೆ ಅನೇಕರು ಭಾಗವಹಿಸಿದ್ದರು.