ಕಲಬುರಗಿಜಿಲ್ಲಾಸುದ್ದಿ

ವಕೀಲ ರಾಕೇಶ ಕಿಶೋರನನ್ನು ದೇಶ ದ್ರೋಹಿ ಎಂದು ಗೋಷಿಸಿ : ದಸಂಸಸ

ಜೇವರ್ಗಿ : ಸುಪ್ರೀಂ ಕೋರ್ಟ ನ್ಯಾಮೂರ್ತಿ ಬಿ. ಆರ್. ಗವಾಯಿ ರವರ ಮೇಲೆ ಶೂ ಎಸೆದ ವಕೀಲ ರಾಕೇಶ ಕಿಶೋರನನ್ನು ದೇಶ ದ್ರೋಹಿ ಎಂದು ಗೋಷಿಸಿ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜೇವರ್ಗಿ ವತಿಯಿಂದ ಆಗ್ರಹಿಸಲಾಯಿತು.

ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಿಂದ ಪ್ರತಿಭಟನ ಮೇರವಣಿಗೆಯ ಮುಖಾಂತರ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಾಲೂಕ ದಂಡಾಧೀಕಾರಿಗಳ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಸುಪ್ರೀಂ ಕೋರ್ಟನಲ್ಲಿ ಕಲಾಪ ನಡೆಯುತ್ತಿರುವಾಗ ರಾಕೇಶ ಕಿಶೋರನೆಂಬ ವಕೀಲ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿರವರ ಮೇಲೆ ಶೂ ಎಸೆಯಲು ಯತ್ನಿಸಿರುವುದು ಖಂಡನಿಯವಾದದ್ದು. ಈ ಘಟನೆಯು ನ್ಯಾಯಾಂಗ ಗೌರವಕ್ಕೆ ದಕ್ಕೆಯುಂಟು ಮಾಡುವಂತ ಸಂಗತಿಯಾಗಿದೆ. ಕೆಳಜಾತಿಯವರು ಉನ್ನತ ಹುದ್ದೆಯಲ್ಲಿ ಕುಳಿತಿರುವುದು ಸನಾತನವಾದಿಗಳಿಗೆ ಸಹಿಸಲಾಗುವುದಿಲ್ಲ ಎಂಬುವುದಕ್ಕೆ ಈ ಕೃತ್ಯ. ಈ ಘಟನೆಯು ಜಾತಿ ಪ್ರತಿಷ್ಟೆಗೆ ಸಾಕ್ಷೀಯಾಗಿದೆ. ಬಾಬಾ ಸಾಹೇಬರ್ ಸಂವಿಧಾನವನ್ನು ಒಪ್ಪುವುದಿಲ್ಲ ನಮಗೆ ಮನು ಸಂವಿಧಾನ ಬೇಕು ಎಂಬುವ ಸನಾತನಿಗಳ ಮನಸ್ಥಿತಿಗೆ ಇದು ಉದಾಹರಣೆ.

ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದಾದರೆ ವಕೀಲ ರಾಕೇಶ ಕಿಶೋರನನ್ನು ದೇಶ ದ್ರೋಹಿ ಎಂದು ಗೋಷಿಸಿ. ಭಾರತದಲ್ಲಿ ಸಂವಿಧಾನವೆ ಪ್ರತಮ ಸಂವಿಧಾನವೆ ಅಂತಿಮ ಎಂಬುವುದನ್ನು ಈ ಜಾತಿವಾದಿ ಮನಸ್ಥಿತಿಯ ಅಜ್ಞಾನಿಗಳಿಗೆ ತಿಳಿಸಲು ರಾಷ್ಟçಪತಿಗಳು ಸುಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಉಗ್ರವಾದ ಹೋರಾಟಗಳನ್ನ ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಹರನಾಳ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶಾಂತಪ್ಪ ಯಲಗೋಡ, ಪುಂಡಲಿಕ ಗಾಯಕವಾಡ, ಸಿದ್ರಾಮ ಕಟ್ಟಿ, ಪ್ರಭಾಕರ ಸಾಗರ, ದೇವಿಂದ್ರ ವರ್ಮಾ, ರವಿ ಕುಳಗೇರಿ, ಶ್ರೀಹರಿ ಕರಕಳ್ಳಿ, ರಾಜಶೇಖರ ಶಿಲ್ಪಿ, ಸಿದ್ದು ಕೇರೂರ, ನಿಜಲಿಂಗ ದೊಡ್ಡಮನಿ, ಅಶೋಕ ದೊಡ್ಡಮನಿ, ಮಹೇಶ ಕೋಕಿಲೆ, ಮಾಪಣ್ಣ ಕಟ್ಟಿ, ಗುಂಡಪ್ಪ ಜಡಗಿ, ಯಶವಂತ ಬಡಿಗೇರ, ಸಿದ್ದಪ್ಪ ಆಲೂರ, ರಾಯಪ್ಪ ಬಾರಿಗಿಡ, ಮಲ್ಲಮ್ಮ ಕೊಬ್ಬಿನ್, ಜಗದೇವಿ ಜಟ್ನಾಕರ್, ಸುರೇಶ ಡುಗಮಕರ್, ಮರೆಪ್ಪ ಜನಿವಾರ, ಅಬ್ದುಲ್ ಘನಿ ರಾವಣ, ಶಿವಲಿಂಗ್ ಸಿಂಗೆ, ಶ್ರೀಮಂತ ಕಿಲೆದಾರ, ಸಿದ್ದು ಹಂಚನಾಳ, ದೇವಿಂದ್ರ ಬಡಿಗೇರ, ಪ್ರಸನ್ ಸಿಂಗೆ, ಪ್ರಕಾಶ ಮಾರಡಗಿ, ಸುನಿಲ ಬಡಿಗೇರ, ರಾಜು ಕಟ್ಟಿಸಂಗಾವಿ ಸೇರಿದಂತೆ ಅನೇಕರಿದ್ದರು.

Related Articles

Leave a Reply

Your email address will not be published. Required fields are marked *

Back to top button