ದಲಿತ ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ದಲಿತ ಸೇನೆಯ ರಾಜ್ಯಾಧ್ಯಕ್ಷ, ಖ್ಯಾತ ವಕೀಲ ಹಣಮಂತ ಯಳಸಂಗಿ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ನೇಮಕ ಸಭೆ ನಗರದಲ್ಲಿ ಜರುಗಿತು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ನಡೆದ ಸಭೆಯಲ್ಲಿ ಕಾಳಗಿ ತಾಲೂಕು ದಲಿತ ಸೇನೆಯ ಅಧ್ಯಕ್ಷರಾಗಿ ಕತ್ತಲಪ್ಪ ಅಂಕ್ಕನ, ಕಾರ್ಯಾಧ್ಯಕ್ಷರಾಗಿ ಮಾರುತಿ ತೇಗಲತ್ತಿಪ್ಪಿ, ಹಾಗೂ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾಗಿ ಆಕಾಶ್ ಹೆಬ್ಬಾಳ ಅವರನ್ನು ಆಯ್ಕೆ ಮಾಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರು, “ದಲಿತ ಸೇನೆಯ ಸಿದ್ಧಾಂತಕ್ಕೆ ತಕ್ಕಂತೆ ಶೋಷಿತರ ನೋವಿಗೆ ಸ್ಪಂದಿಸಿ, ಜನರ ಸಮಸ್ಯೆಗಳಿಗೆ ಹೋರಾಡುವುದು ಮುಖ್ಯ” ಎಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರು, “ದಲಿತ ಸೇನೆಯ ಕಾರ್ಯಕರ್ತರು ಸದಾ ಅನ್ಯಾಯದ ವಿರುದ್ಧ ಹೋರಾಡಬೇಕು. ಸಂಘಟನೆಯ ಹೆಸರಿನಲ್ಲಿ ಯಾರಾದರೂ ಅಧಿಕಾರಿಗಳಿಗೆ ಅಂಜಿಕೆ ಹಾಕಿದರೆ ಅಥವಾ ಸರ್ಕಾರಿ ಕಛೇರಿಗಳಲ್ಲಿ ತೊಂದರೆ ನೀಡಿದರೆ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರು ಸಂತೋಷ ಪಾಳಾ, ಅಷ್ಪಕ್ ಹಾಗೂ ಇತರರು ಹಾಜರಿದ್ದರು.