ಕೇದಾರಲಿಂಗಯ್ಯ ಹಿರೇಮಠ್ ಸೋಲಲ್ಲ ಅಜಯ್ ಸಿಂಗ್ ಸೋಲು: ಸಾಹೇಬ ಗೌಡ ಕಡ್ಲಿ.

ಜೇವರ್ಗಿ : ಕಲಬುರ್ಗಿ–ಯಾದಗಿರ್ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಸವರಾಜ್ ಪಾಟೀಲ್ ನರಿಬೋಳ್ ಅವರು ಗೆಲುವು ಸಾಧಿಸಿದ್ದಾರೆ.
ಈ ಚುನಾವಣೆಯಲ್ಲಿ ಕೇದಾರಲಿಂಗಯ್ಯ ಹಿರೇಮಠ್ ಮತ್ತು ಡಾ. ಅಜಯ್ ಸಿಂಗ್ ಪರ್ಯಾಯ ಅಭ್ಯರ್ಥಿಗಳಾಗಿ ಬಲ ಪರೀಕ್ಷೆ ನಡೆಸಿದರೂ ಇಬ್ಬರೂ ಸೋಲಿನ ಚುಕ್ಕಾಣಿ ಹಿಡಿದಿದ್ದಾರೆ.
ಈ ಕುರಿತು ಜೇವರ್ಗಿಯ ಸಾಹೇಬಗೌಡ ಕಡ್ಲಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಡಾ. ಅಜಯ್ ಸಿಂಗ್ ವಿರುದ್ಧ ಕಿಡಿ ಉಗಿದ್ದಾರೆ. ಅವರು ಹೇಳಿದ್ದಾರೆ —“ಜೇವರ್ಗಿ ಕ್ಷೇತ್ರದ ಶಾಸಕರಾಗಿರುವ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಡಾ. ಅಜಯ್ ಸಿಂಗ್ ರವರು ಉದ್ದೇಶಪೂರ್ವಕವಾಗಿಯೇ ಕೇದಾರಲಿಂಗಯ್ಯ ಹಿರೇಮಠ್ ರವರ ಸೋಲನ್ನು ಬಯಸಿದ್ದಾರೆ.
ಅವರ ತಂದೆ ದಿ. ಧರ್ಮಸಿಂಗ್ ಹಾಗೂ ಅಜಯ್ ಸಿಂಗ್ ಇಬ್ಬರೂ ತಮ್ಮದೇ ರಾಜಕೀಯ ಹಿತಾಸಕ್ತಿ ಮತ್ತು ನಾಯಕತ್ವ ಉಳಿಸಿಕೊಳ್ಳುವುದರಲ್ಲೇ ಆಸಕ್ತಿ ತೋರಿದ್ದಾರೆ, ಇತರ ನಾಯಕರನ್ನು ಬೆಳೆಸುವ ಮನಸ್ಸು ಇವರಿಗಿಲ್ಲ,” ಎಂದು ಅವರು ಆರೋಪಿಸಿದರು.
ಅವರು ಮುಂದುವರೆದು —“ಡಾ. ಅಜಯ್ ಸಿಂಗ್ ರವರು ನಿಜವಾದ ಸಹಕಾರ ಮನೋಭಾವದಿಂದ ಮುಂದಾದರೆ ಹಿರಿಯ ರೈತ ಹೋರಾಟಗಾರ ಹಾಗೂ ರಾಜಕೀಯ ಮುತ್ಸದ್ದಿ ಕೇದಾರಲಿಂಗಯ್ಯ ಹಿರೇಮಠ್ ರವರ ಗೆಲುವಿಗೆ ಸಂಪೂರ್ಣ ಸಹಕಾರ ನೀಡಬಹುದಿತ್ತು.
ಆದರೆ, ಅವರು ಹಾಗೆ ಮಾಡದೇ ತಮ್ಮದೇ ರಾಜಕೀಯ ಅಹಂಕಾರವನ್ನು ತೋರಿಸಿದ್ದಾರೆ,” ಎಂದು ಸಾಹೇಬಗೌಡ ಕಡ್ಲಿ ಟೀಕಿಸಿದರು.
ಈ ಚುನಾವಣಾ ಫಲಿತಾಂಶದೊಂದಿಗೆ ಜಿಲ್ಲಾ ಸಹಕಾರ ಬ್ಯಾಂಕ್ ರಾಜಕೀಯದಲ್ಲಿ ಹೊಸ ಸಮೀಕರಣಗಳು ಮೂಡಿಬಂದಿದ್ದು, ಸ್ಥಳೀಯ ನಾಯಕತ್ವದ ಒಳಸಂಘರ್ಷ ಮತ್ತಷ್ಟು ಬಯಲಾಗಿದೆ. ಬಸವರಾಜ್ ಪಾಟೀಲ್ ನರಿಬೋಳ್ ಅವರ ಗೆಲುವು ಸಹಕಾರ ಕ್ಷೇತ್ರದಲ್ಲಿ ಹೊಸ ಚರ್ಚೆಗೂ ಕಾರಣವಾಗಿದೆ.



