ಕಲಬುರಗಿಜಿಲ್ಲಾಸುದ್ದಿ

ರಮೇಶ ಕತ್ತಿ ಕ್ರಮಕ್ಕೆ ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಸಮಾಜದವತಿಯಿಂದ ಪ್ರತಿಭಟನೆ

ವಾಲ್ಮೀಕಿ ಸಮಾಜದದವರನ್ನು ನಿಂದನೆ ಮಾಡಿದ ರಮೇಶ ಕತ್ತಿಗೆ ಗಡಿಪಾರು ಮಾಡುವಂತೆ ವಾಲ್ಮೀಕಿ ಸಮಾಜ ಆಗ್ರಹ

ಚಿತ್ತಾಪುರ: ವಾಲ್ಮೀಕಿ ಸಮಾಜದವರನ್ನು ಅಶ್ಲೀಲವಾಗಿ ನಿಂದಿಸಿದ ಬೆಳಗಾವಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ಗಡಿಪಾರು ಮಾಡಬೇಕು ಎಂದು ಮಹರ್ಷಿ ವಾಲ್ಮೀಕಿ ಸಮಾಜ ತಾಲೂಕು ಯುವ ಘಟಕದ ಅಧ್ಯಕ್ಷ ರಾಜು ದೊರೆ ಆಗ್ರಹಿಸಿದರು.


ವಾಲ್ಮೀಕಿ ಸಮಾಜದವರನ್ನು ಅಶ್ಲೀಲವಾಗಿ ನಿಂದಿಸಿದ ಬೆಳಗಾವಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಘಟಕದವತಿಯಿಂದ ಮಂಗಳವಾರ ಪಟ್ಟಣದ ತಹಸೀಲ್ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಹಾಗೂ ಪಿಎಸ್‌ಐ ಅವರಿಗೆ ಪ್ರತ್ಯೇಕವಾಗಿ ಸಲ್ಲಿಸಿ ಮಾತನಾಡಿದ ಅವರು. ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಗಡಿಪಾರು ಮಾಡಬೇಕೆಂದರು.


ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ರಮೇಶ ಕತ್ತಿ ವಾಲ್ಮೀಕಿ ಸಮುದಾಯದವರನ್ನು ಕುರಿತು ಅಶ್ಲೀಲ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ. ಇದರಿಂದ ರಾಜ್ಯದ 75 ಲಕ್ಷ ವಾಲ್ಮೀಕಿ ಸಮುದಾಯದವರಿಗೆ ತೀವ್ರ ನೋವುಂಟಾಗಿದೆ. ನಮ್ಮ ಭಾವನೆಗಳಿಗೆ ದಕ್ಕೆ ತಂದಿದ್ದಾರೆ. ಜಿಲ್ಲೆಯ ಬೇರೆ ಬೇರೆ ಸಮುದಾಯಗಳ ಮಧ್ಯೆ ವಿಷ ಬೀಜ ಬಿತ್ತ್ರಿ ಘರ್ಷಣೆ ಉಂಟು ಮಾಡುತ್ತಿದ್ದಾರೆ. ಕಳೆದ ಮೂರು ಬಾರಿ ಸತತವಾಗಿ ರಮೇಶ ಕತ್ತಿಯವರು ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ದಲಿತ ಸಮುದಾಯದ ಭಾವೆನಗಳಿಗೆ ದಕ್ಕೆ ತರಿದಿರುವ ಕತ್ತಿ ಅವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.


ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಪಿಎಸ್‌ಐ ಮಂಜುನಾಥರೆಡ್ಡಿ ಅವರಿಗೆ ಸಲ್ಲಿಸಿದರು.


ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾಯ ದೊರೆ, ಪ್ರಧಾನ ಕಾರ್ಯದರ್ಶಿ ಹುಸನಪ್ಪ ಲಾಡ್ಲಾಪುರ, ಪ್ರಮುಖರಾದ ಮಹಾದೇವಪ್ಪ ಚೂರಿ, ಸಾಬಣ್ಣ ಮುಸಲಾ, ಭಾಗಪ್ಪ ನಾಯ್ಕೋಡಿ, ಸಾಬಣ್ಣ ಕುಂಬಾರಹಳ್ಳಿ, ಹಣಮಂತ ಗಲಗಿನ್, ಚಂದ್ರು ನಾಯ್ಕೋಡಿ, ಮಾನಪ್ಪ ದೊರೆ, ರಾಯಪ್ಪ ದೊರೆ, ರಮೇಶ ಕೋರವಾರ, ರಾಜು ಕಲಬುರಗಿ, ಮರಲಿಗಪ್ಪ ಮಳಗಿ, ದೇವಿಂದ್ರಪ್ಪ ನಾಯಕ, ಶಿವಶರಣ್ಪ ಸುಬೇದಾರ, ಸಿದ್ದಪ್ಪ ದೊರೆ, ರಮೇಶ ನಾಯ್ಕೋಡಿ, ನಾಗಪ್ಪ ಬೊಮ್ಮನಳ್ಳಿ, ಗೋಪಿಕೃಷ್ಣ ಸುಬೇದಾರ, ಪ್ರೇಮ ಸುಬೇದಾರ, ಶಾಮ ಸುಬೇದಾರ, ಸುಭಾಶ್ಚಂದ್ರ ದೊರೆ, ರಾಮಕೃಷ್ಣ ಸುಬೇದಾರ, ಸಂಜಯ ಬುಳಕರ್ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button