ಕಲಬುರಗಿಜಿಲ್ಲಾಸುದ್ದಿ

ಜೇವರ್ಗಿ|ಸೋನ್ನ ಗ್ರಾಮ ಒನ್ ನಲ್ಲಿ ಹಣ ಲೂಟಿ

ರೆಷನ್ ಕಾರ್ಡ ಮಾಡಲು ಸಾವಿರಾರು ರೂಪಾಯಿಗಳನ್ನ ಪಡೆಯುತ್ತಾರೆ. ನಮಗೆ ಕಾರ್ಡ ಆದರೆ ಸಾಕು ಎಂದು ಹಣವನ್ನು ನೀಡುತ್ತಾರೆ ಸಾರ್ವಜನಿಕರು.-ಹೆಸರು ಹೆಳಬಯಸದವರು.

ಜೇವರ್ಗಿ : ತಾಲೂಕಿನ ಸೊನ್ನ ಗ್ರಾಮದಲ್ಲಿ ಗ್ರಾಮ ಒನ್ ನಲ್ಲಿ ಯಾರ ಭಯವಿಲ್ಲದೆ ರೈತರ ಹಾಗೂ ಸಾರ್ವಜನಿಕರಲ್ಲಿ ಹೆಚ್ಚಿನ ಹಣವನ್ನು ಪಡೆಯುವುದರ ಮುಖಾಂತರ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಷವನ್ನು ವ್ಯಕ್ತಪಡಿಸಿದರು.

ತಾಲೂಕಿನ ಸೊನ್ನ ಗ್ರಾಮದಲ್ಲಿ ರೈತರ ಎಫ್ ಐ ಡಿ ಮಾಡಲು 200 ರಿಂದ 400 ರೂಪಾಯಿ ಪಡೆಯಲಾಗುತ್ತಿದೆ. ಯಾಕೆ ಇಷ್ಟು ಹಣ ಎಂದು ಕೆಳಿದರೆ ಅದಕ್ಕೆ ಇಷ್ಟು, ಇದಕ್ಕೆ ಇಷ್ಟು ಎಂದು ಹೆಳುವುದರ ಮುಖಾಂತರ ರೈತರಲ್ಲಿ ಹಣವನ್ನು ಕಿಳಲಾಗುತ್ತಿದೆ. ಇನಕಂ ಕಾಷ್ಟ, ಮಾಡಲು 400 ರಿಂದ 600 ರೂಪಾಯಿವರೆಗೆ ಹಣವನ್ನು ಪಡೆಯಲಾಗುತ್ತಿದೆ. ಒಂದು ವಾರದಲ್ಲಿ ಮಾಡಿಸಿಕೊಂಡುತ್ತೆವೆ ಅದಕ್ಕೆ ಇಷ್ಟು ಹಣ ಎನ್ನುತ್ತಾರೆ. ಆದರ್ ಕಾರ್ಡ್ ಪ್ರಿಂಟ್ ಕೊಡಲು 100 ರೂಪಾಯಿಗಳನ್ನ ಪಡೆಯುತ್ತಾರೆ.

ಪ್ರಮುಖವಾಗಿ ಹೆಳುವುದಾದರೆ ಗ್ರಾಮ ಒನ್ ಗೆ ಇನ್ನು ಕೂಡ ಲಾಗಿನ್ ನೀಡಲ್ಲ ಎನ್ನಲಾಗುತ್ತಿದೆ. ಆದರು ಕೂಡ ಯಾರ ಭಯವಿಲ್ಲದೆ ರಾಜಾ ರೋಷವಾಗಿ ಜನರಲ್ಲಿ ಹಣ ವಸುಲಿ ಮಾಡಲು ಬೆರೆಯವರ ಲಾಗಿನ ಮುಲಕ ಕಾರ್ಯಗಳನ್ನ ಮಾಡಲಾಗುತ್ತಿದೆ. ಸರಕಾರದ ಆದೆಶಗಳು ಇವರಿಗೆ ಲಿಕಕ್ಕಿಲದಂತೆ ಕಾಣಿಸುತ್ತಿದೆ. ತಲಾಟಿ ಹಾಗೂ ವಾಲಿಕರ ಗ್ರಾಮಕ್ಕೆ ಬಂದರು ಕೂಡ ಇಂತಹ ಲೂಟಿ ಕೋರರಿಗೆ ಕಡಿವಾಣ ಹಾಕುತ್ತಿಲ್ಲ. ಕುಡಲೆ ಸಂಬದಪಟ್ಟ ಅಧಿಕಾರಿಗಳ ಈ ಗ್ರಾಮ ಒನ್ ನಡೆಸುವವರ ಮೇಲೆ ಕ್ರಿಮಿನಲ್ ಮೊಕದಮ್ಮೆ ಹಾಕಿ ಬೆರೆ ಕಡೆಯಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಸಬೇಕು.

ಇನ್ನು ಲಾಗಿನ್ ಬರದೆ ಇದ್ದರು ಕೂಡ ಇಂತಹ ಲೂಟಿ ಕಾರ್ಯಕ್ಕೆ ಗ್ರಾಮ ಒನ್ ನವರು ಇಳಿದಿರುವುದು ವಪರ್ಯಾಸ್. ಕೂಡಲೆ ಇವರಿಗೆ ಕಡಿವಾಣ ಹಾಕಿ ರೈತರ ಹಾಗೂ ಗ್ರಾಮಸ್ಥರ ಹಣವನ್ನು ಉಳಿಸಬೇಕು ಹಾಗೂ ಸುಕ್ತ ಕ್ರಮ ಕೈಗೊಂಡು ಇಂತಹ ಲೂಟಿ ಕೋರರಿಗೆ ಶಿಕ್ಷೆಯನ್ನ ನೀಡಬೇಕು ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button