ಹಾಸ್ಯನಟಿ ನಯನಾ ವಿರುದ್ದ ಕ್ರಮಕ್ಕೆ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಆಗ್ರಹ

ಕಲಬುರಗಿ: ಕಾಮಿಡಿ ಕಿಲಾಡಿಗಳು ಟಿವಿ ರಿಯಾಲಿಟಿ ಶೋನಿಂದ ಬೆಳಕಿಗೆ ಬಂದಿರುವ ಹಾಸ್ಯನಟಿ ನಯನ ಕಾರ್ಯಕ್ರಮವೊಂದರಲ್ಲಿ ‘ಹೊಲಸು’ ‘ಹೊಲಗೇರಿ’ ಎಂದು ಹೇಳುವ ಮೂಲಕ ಶೋಷಿತ ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿರುವ ಹಿನ್ನಲೆಯಲ್ಲಿ ನಟಿ ನಯನ ವಿರುದ್ದ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕಠಿಣಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅ.29ರಂದು ಮೈಸೂರು ಮೆಟ್ರೋ ಮನಿಮಿಥಾ ಚೀಟ್ ಫಂಡ್ ಸಂಸ್ಥೆ ಬಗ್ಗೆ ಮಾತನಾಡುತ್ತಾ ‘ಹೊಲಗೇರಿ’ ಮಾಡುತ್ತಾರಲ್ಲ ಅನ್ನೋದರ ಜೊತೆಗೆ ‘ಹೊಲಸು ಹೊಲಗೇರಿ’ ಎಂಬ ನಿಷೇಧಿತ ಪದ ಬಳಸುವುದರ ಮೂಲಕ ತನ್ನ ಕೊಳಕು ಬುದ್ದಿಯನ್ನು ಪ್ರದರ್ಶಿಸಿ ಜಾತಿಯತೆಯೇ ಮನಸ್ಥಿತಿಯನ್ನೂ ಬಹಿರಂಗ ಪಡಿಸಿದ್ದು ಅತ್ಯಂತ ಖಂಡನೀಯಾಗಿದ್ದು ಮತ್ತು ಇದು ಶೋಷಿತ ಸಮುದಾಯದ ಹೊಲೆಯ ಜಾತಿಗೆ ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿ ವಿಕೃತಿ ಮೆರೆದಿದ್ದು ಸಮುದಾಯಕ್ಕೆ ಬಹಳ ನೋವುನ್ನುಂಟು ಮಾಡಿ ದ್ದಲ್ಲದೆ ಅಪಮಾನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸರಕಾರ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣವೇ ನಟಿ ನಯನಾ ಎಂಬ ಹೆಸರಿನ ನಟಿ ವಿರುದ್ಧ ದೌರ್ಜನ್ಯ ಕಾಯ್ದೆ ಅನ್ವಯ ಕ್ರಮ ಜರುಗಿಸಲೇಬೇಕೆಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ದಲಿತ ಸೇನೆ ನಗರ ಅಧ್ಯಕ್ಷರು ಅರವಿಂದ ಕಮಲಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ, ದಲಿತ ಸೇನೆ ನಗರ ಪ್ರಧಾನ ಕಾರ್ಯದರ್ಶಿ ಕಾನು ಕೋವಿ ಅವರು ಆಗ್ರಹಿಸಿದ್ದಾರೆ.



