ಗ್ಲೋಬಲ್ ಐಕನ್ ಬಿಸಿನೆಸ್ ಅಂಡ್ ಅಚೀವರ್ಸ್ ಅವಾರ್ಡ್–2026 ಪ್ರದಾನ

ಕಲಬುರಗಿ: ನಗರದ ಜಸ್ಟ್ ಕ್ಲಬ್‌ನಲ್ಲಿ ಕರ್ನಾಟಕದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 22 ಮಂದಿಗೆ ಗ್ಲೋಬಲ್ ಐಕನ್ ಬಿಸಿನೆಸ್ ಅಂಡ್ ಅಚೀವರ್ಸ್ ಅವಾರ್ಡ್–2026 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಅಮರೇಶ್ವರಿ ಬಾಬುರಾವ್ ಚಿಂಚನಸೂರ್, ಡಾ. ಸುರೇಶ್ ಎಲ್ ಶರ್ಮಾ, ಆನಂದ ಶಾಹ, ಶಾಮ್ ಕಂಡೆಲ್ ವಾಲ್, ವೀರೇಶ್ ವಿ, ಡಾ. ಸುನೀಲ ರಾಠೋಡ, ಮೀತಾ, ಡಾ. ಸಿದ್ದು ಪಾಟೀಲ, ಪ್ರಶಾಂತ್ ಬೀಜಸವುರ, ಪವನ್ ಗುತ್ತೇದಾರ, ಕುಶಾಲ್ ಆಂದೋಲ, ಕುಮಾರಿ ರಾಘವಿ ಅರಳಗುಂಡಗಿ, ಮಲ್ಲಿಕಾರ್ಜುನ್ ಮೋದಿ, ಸುರೇಂದ್ರ ನರೋಣಕರ್, ರವಿ ಗಾಜರೆ, ರಾಘವೇಂದ್ರ ಕಲ್ಯಾಣಕರ್, ನಿಂಗರಾಜ್ ಸಿಂಗಾಡಿ, ಅನ್ವಿತಾ ಆರಾಧನ, ಸುಪ್ರಿಯ ಹತ್ತರಕಿ, ಕಾಶಿನಾಥ್ ವಾರಿಕ್, ಕುಮಾರಿ ಸುನಿತಾ ದೊಡ್ಡನಿ ಹಾಗೂ ಶೌರ್ಯ ರಾವ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಡಾ. ಅಮರೇಶ್ವರ ಬಾಬುರಾವ್ ಚಿಂಚನಸೂರ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುರೇಶ್ ಶರ್ಮಾ, ನೀಲಕಂಠರಾವ ಮೂಲಗೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಹಾಗೂ ಚಲನಚಿತ್ರ ನಟಿಯರಾದ ಐಶ್ವರ್ಯ ಸಿಂದೋಗಿ ಮತ್ತು ರಾಘವಿ ಅರಳಗುಂಡಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಈಶ್ವರ ಹೆಗ್ಡೆ, ಪ್ರದೀಪ್ ಓಂಕಾರ್, ಸಚಿನ್ ಪೂಜಾರಿ, ಅನಿಲ್ ಬಂಡಿ, ಸಾಗರ್ ಭಾವಿ, ಬೀರು ಪೂಜಾರಿ, ಶಿವಕುಮಾರ್ ಪಾಟೀಲ್, ಸಚಿನ್ ಶಿವರಾಜ್ ಕೊಡಸಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು ಹೈದರಾಬಾದ್ ಕರ್ನಾಟಕ ಯುವಕಲಾವಿದರ ಸಾಂಸ್ಕೃತಿಕ ನೃತ್ಯ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಆಯೋಜಕ ಗುರು ಬಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



