ಕಲಬುರಗಿಜಿಲ್ಲಾಸುದ್ದಿ

ರಾಷ್ಟ್ರಕವಿ ಕುವೇಂಪು 121ನೇ ಜನ್ಮದಿನ ಆಚರಣೆ – ‘ಕುವೆಂಪುರತ್ನ’ ಪ್ರಶಸ್ತಿ ಪ್ರದಾನ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ ಅವರ ನೇತೃತ್ವದಲ್ಲಿ ರಾಷ್ಟ್ರಕವಿ ಕುವೇಂಪು ಅವರ 121ನೇ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಕುವೇಂಪುರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಾದ ಡಾ. ಸಂಗೀತಾ ಎಂ. ಹಿರೇಮಠ, ಮಂಗಳಾ ವಿ. ಕಪರೆ, ಅನಿತಾ ಬಡಿಗೇರ, ಅಂಬುಜಾ ಎಂ.ಡಿ., ಏ.ಕೆ. ರಾಮೇಶ್ವರ, ಎಸ್.ಎಲ್. ಪಾಟೀಲ, ಅಮೃತ ಡಿ. ದೊಡ್ಡಮನಿ ಹಾಗೂ ಪರೋಷೋತ್ತಮ ಕುಲಕರ್ಣಿ ಅವರಿಗೆ ‘ರಾಷ್ಟ್ರಕವಿ ಕುವೆಂಪುರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಶ್ರೀ ಜೈ ಸುರೇಶ ಮಾಲಿಕ್, ಹಜರತ್ ಬಾಬುಶಾ ಸಾಹೇಬ್ ದಾದಾಪೀರ್ (ಗೋಟುರ್), ಪೂಜ್ಯ ಶ್ರೀ ಷ.ಪೂ. ಗುರುರಾಜೇಂದ್ರ ಶಿವಯೋಗಿಗಳು ಅವರು ದಿವ್ಯ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಸಹಾರ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಎಂ.ಡಿ. ಸಿದ್ದಿಕ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮಾಜಿ ಸದಸ್ಯ ಸುರೇಶ ಬಡಿಗೇರ, ದಕ್ಷಿಣ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮುಲಗೆ, ಕಾಂಗ್ರೆಸ್ ಮುಖಂಡ ರಾಜೀವ ಜಾನೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಧೂಳಪ್ಪ ದೊಡ್ಡಮನಿ, ಪಂಚ ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಕಟ್ಟಿಮನಿ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ್ ಬಾಲಾಜಿ, ಕಾಂಗ್ರೆಸ್ ಯುವ ಮುಖಂಡ ಗೀರಿಶ ಬೋರೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಜೈಭೀಮ್ ಹುಡುಗಿ, ಸನ್‌ರೈಸ್ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ರಾಜಕುಮಾರ್ ಆರ್., ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಡಾ. ಅಣ್ಣಪ್ಪಾ ಎಸ್.ಜಿ., ನ್ಯಾಯವಾದಿ ಶ್ರೀನಿವಾಸ ವಿಶ್ವಕರ್ಮ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್, ಅಣವೀರ ಪಾಟೀಲ, ಶಿವಕುಮಾರ ಯಾದವ, ಪಿಂಟು ಜಮಾದಾರ, ಹುಲಿಕಂಠ, ಮಲ್ಲು, ದರ್ಶನ, ಶ್ರೀಮಂತ ಸೇರಿದಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.

Related Articles

Leave a Reply

Your email address will not be published. Required fields are marked *

Back to top button