ಕಲಬುರಗಿಜಿಲ್ಲಾಸುದ್ದಿ

ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಕೆಲಸ ಪ್ರಾರಂಭಿಸಿ: ಜೈ ಕನ್ನಡಿಗರ ರಕ್ಷಣಾ ವೇದಿಕೆ ಮನವಿ

ಕಲಬುರಗಿ: ನಗರದ ರೈಲ್ವೆ ಇಲಾಖೆಯ ವಿಭಾಗೀಯ ಮುಖ್ಯ ಕಛೇರಿ ಕೆಲಸವನ್ನು ತಕ್ಷಣ ಪ್ರಾರಂಭಿಸುವುದು ಸೇರಿದಂತೆ ಹಲವು ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸಲು ಜೈ ಕನ್ನಡಿಗರ ರಕ್ಷಣಾ ವೇದಿಕೆ (ರಿ) ರಾಜ್ಯ ಘಟಕವು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದೆ. ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಫರತಾಬಾದ ಅವರ ನೇತೃತ್ವದಲ್ಲಿ ಈ ಮನವಿ ಕಲಬುರಗಿ ರೈಲ್ವೆ ಇಲಾಖೆಯ ಅಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು.

ಕಲಬುರಗಿ ರೈಲ್ವೆ ವಿಭಾಗೀಯ ಕಛೇರಿ ಕೆಲಸ ಹಲವು ವರ್ಷಗಳಿಂದ ಸ್ಥಗಿತವಾಗಿದ್ದು, ಕಲ್ಯಾಣ ಕರ್ನಾಟಕದ ಜನರ ಬಹುಕಾಲದ ಕನಸಾದ ಈ ಯೋಜನೆ ಇನ್ನೂ ಪ್ರಾರಂಭವಾಗದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ವಿಭಾಗೀಯ ಕಛೇರಿ ಆರಂಭವಾದರೆ ನೂರಾರು ಮಂದಿಗೆ ಉದ್ಯೋಗಾವಕಾಶ ಸಿಗುವುದರ ಜೊತೆಗೆ ರೈಲ್ವೆ ಸೇವೆಗಳ ವಿಸ್ತರಣೆಗೂ ನೆರವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೇ ಸಂದರ್ಭದಲ್ಲಿ ಮತ್ತೂ ಮೂರು ಪ್ರಮುಖ ಬೇಡಿಕೆಗಳನ್ನು ವೇದಿಕೆ ಮುಂದಿಟ್ಟಿದೆ:

  • ಸೋಲಾಪೂರು–ಯಶವಂತಪುರ ರೈಲ್ವೆಗೆ “ಗೌತಮ ಬುದ್ಧ ಎಕ್ಸ್‌ಪ್ರೆಸ್” ಎಂಬ ಹೆಸರನ್ನು ನಾಮಕರಣ ಮಾಡುವುದು.
  • ಕಲಬುರಗಿ–ಬಾಲೆಹಳ್ಳಿಯೊಂದೆ ಭಾರತ ಟ್ರೇನ್‌ನ ಪ್ರಸ್ತುತ ಬೆಳಿಗ್ಗೆ 5 ಗಂಟೆಯ ಸಮಯವನ್ನು ಬೆಳಿಗ್ಗೆ 7ಕ್ಕೆ ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು.
  • ಸೋಲಾಪೂರ–ಮುಂಬೈ ಒಂದೆ ಭಾರತ ಟ್ರೇನ್‌ನ್ನು ಕಲಬುರಗಿಯಿಂದ ಮುಂಬೈಗೆ ಸವಾರಿ ಮಾಡುವಂತೆ ಮಾರ್ಗ ಬದಲಾವಣೆ.

ಈ ಮೂರು ಬೇಡಿಕೆಗಳು ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರಯಾಣಿಕರಿಗೆ ನೇರ ಅನುಕೂಲ ಕಲ್ಪಿಸಬಹುದಾದ ಪ್ರಮುಖ ಕ್ರಮಗಳಾಗಿವೆ ಎಂದು ವೇದಿಕೆ ಮನವಿಯಲ್ಲಿ ಒತ್ತಿ ಹೇಳಿದೆ.

ಮನವಿ ಸಲ್ಲಿಕೆ ವೇಳೆ ಸುರೇಶ ಹನಗುಡಿ, ಅಕ್ಷಯ, ಅಣವೀರ ಪಾಟೀಲ, ರವಿ ಸಜ್ಜನ್, ಬಸ್ಸು, ಅಜಯ, ಪ್ರವೀಣ ಸಿಂಧೆ, ಅಂಬು ಮಸ್ಕಿ, ಸಾಯಿಕುಮಾರ ಸಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಬುರಗಿ ರೈಲ್ವೆ ಅಭಿವೃದ್ಧಿಗೆ ಜನರ ನಿರೀಕ್ಷೆ–ಬೇಡಿಕೆಗಳ ಈಡೇರಿಕೆಗೆ ವೇದಿಕೆಯ ಒತ್ತಾಯ ತೀವ್ರ!

Related Articles

Leave a Reply

Your email address will not be published. Required fields are marked *

Back to top button