ಕಲಬುರಗಿಯಲ್ಲಿ ತಳವಾರ ಮಹಾಸಭಾ ಮನವಿ – ಸಿಎಂ ಸಿದ್ದರಾಮಯ್ಯ ಭರವಸೆ
ಚಂದ್ರಕಾಂತ ದಶರಥ ತಳವಾರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ ದಶರಥ ತಳವಾರ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಅಸಂವಿಧಾನಿಕ ಸುತ್ತೋಲೆ (Unconstitutional Circutar) STW/SECB/STP/315/2024 ದಿನಾಂಕ: 07-02-2025) ಹಿಂಪಡೆಯುವಂತೆ ಹಾಗೂ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಮತ್ತು ಸರ್ಕಾರಿ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವ ಕಾರ್ಯ ಮುಂದುವರಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಿನ್ನೆ ರಾತ್ರಿ ಕಲಬುರಗಿಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜೊತೆ ನಡೆದ ಚರ್ಚೆಯ ನಂತರ ಒಂದು ವಾರದೊಳಗೆ ಅಸಂವಿಧಾನಿಕ ಆದೇಶವನ್ನು ಹಿಂಪಡೆಯಲಾಗುವುದು ಹಾಗೂ ತಳವಾರ ಸಮಾಜದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡೆ ಮತ್ತು ಹೋರಾಟಗಾರ್ತಿ ಸುನಿತಾ ತಳವಾರ, ತಳವಾರ ಮಹಾಸಭಾ ಜೇವರ್ಗಿ ತಾಲೂಕು ಅಧ್ಯಕ್ಷ ಗೀರಿಶ ತುಂಬಗಿ, ಯಡ್ರಾಮಿ ತಾಲೂಕು ಅಧ್ಯಕ್ಷ ರಾಚಣ್ಣ ತಳವಾರ, ಅಫಜಲಪೂರ ತಾಲೂಕು ಅಧ್ಯಕ್ಷ ಗುರುನಾಥ ಕೋರಬಾ ಹಾವನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.