ಕಲಬುರಗಿಜಿಲ್ಲಾಸುದ್ದಿ
ಘತ್ತರಗಾದಲ್ಲಿ ವಾಲ್ಮೀಕಿ ವೃತ್ತ ಉದ್ಘಾಟನೆ ಮತ್ತು ಜಯಂತೋತ್ಸವ

ಅಫಜಲಪುರ: ತಾಲೂಕಿನ ಘತ್ತರಗಾ ಗ್ರಾಮದಲ್ಲಿ ತಳವಾರ ಸಮಾಜದ ವತಿಯಿಂದ ರಾಮಾಯಣದ ಕತೃ ಮಹರ್ಷಿ ವಾಲ್ಮೀಕಿಯವರ ವೃತ್ತ ಉದ್ಘಾಟನೆ ಹಾಗೂ ಜಯಂತೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಕಾಂತ ಸಿಂಗೆ, ಬಾಗಪ್ಪ ಕಟ್ಟಿಮನಿ, ಸಾತಯ್ಯ ಹಿರೇಮಠ, ತಳವಾರ ಸಮುದಾಯ ಮುಖಂಡರಾದ ಸಿದ್ದಪ್ಪ ಗುಡೆದ, ಸುಭಾಸ ಹಂಚನಾಳ, ಶಿವಪುತ್ರ ಚೌರದ, ಮಲ್ಲಪ್ಪ ಹಂಚನಾಳ ಸೇರಿದಂತೆ ಅನೇಕರು ಭಾಗವಹಿಸಿದರು.
ಪರಿಶಿಷ್ಟ ಪಂಗಡ ಸಮಾಜ ಸೇವಾ ಸಾಂಸ್ಕೃತಿಕ ಸಂಘದ ಗ್ರಾಮ ಘಟಕದ ಅಧ್ಯಕ್ಷ ಸುನೀಲ ಚೌರದ, ಉಪಾಧ್ಯಕ್ಷ ಭೀಮಾಶಂಕರ ಹಂಚನಾಳ ಹಾಗೂ ಸದಸ್ಯರಾದ ಮಲ್ಲಿಕಾರ್ಜುನ ಕಡಕೋಳ, ಮಲ್ಲಿಕಾರ್ಜುನ ಚೌರದ, ನಾಗಪ್ಪ ಹಂಚನಾಳ, ಬಸವರಾಜ ನಿಂಬರಗಿ, ರಾಹುಲ ರಮಗಾ, ಗೋಪಾಲ ಗುಡೆದ ಹಾಗೂ ಇತರರು ಉಪಸ್ಥಿತರಿದ್ದರು