ನಾಗಾವಿ ಪಲ್ಲಕ್ಕಿ ಉತ್ಸವಕ್ಕೆ ಹರಿದುಬಂದ ಭಕ್ತ ಸಾಗರ
ಎಲ್ಲೆಡೆ ಅನ್ನ ದಾಸೋಹ, ದೀಪಾಲಂಕಾರಗಳಿಂದ ಕಂಗೋಳಿಸಿದ ಚಿತ್ತಾಪುರ

ಚಿತ್ತಾಪುರ: ಪಟ್ಟಣದ ಹೊರವಲಯದಲ್ಲಿರುವ ಸುಪ್ರ್ರಸಿದ್ಧ ರಾಷ್ಟಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವ ಮಂಗಳವಾರ ಅಪಾರ ಜನಸಾಗರದ ಮಧ್ಯೆ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ ಸರಾಫ ಲಚ್ಛಪ್ಪ ನಾಯಕ ನಿವಾಸದಲ್ಲಿ ವಿಘ್ನೇಶ್ವೆರ, ಗುರು ಹಾಗೂ ದೇವಿಯ ಪಲ್ಲಕ್ಕಿ ಪೂಜೆಯು ತಹಸೀಲ್ದಾರ್ ನಾಗಯ್ಯ ಹಿರೇಮಠ, ಧರ್ಮದರ್ಶಿ ರತ್ನಾಕರ ನಾಯಕ್, ಪುರಸಭೆ ಮಾಜಿ ಅಧ್ಯಕ್ಷ ವಿನಾಯಕರಾವ ನಾಯಕ್ ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಜರುಗಿತು.
ಭಕ್ತರು ಮೆರವಣೆಗೆಯಲ್ಲಿ ದಾರಿಯೂದ್ದಕ್ಕೂ ಹೂಮಳೆಗೈದರು. ಧರ್ಮದರ್ಶಿ ರತ್ನಾಕರ ನಾಯಕ, ಪುರಸಭೆ ಅಧ್ಯಕ್ಷ ಅನ್ನಪೂರ್ಣ ಕಲ್ಲಕ್, ಪ್ರಮುಖರಾದ ವಿನಾಯಕರಾವ ನಾಯಕ್, ಗೌತಮ ನಾಯಕ, ಕಣ್ವ ನಾಯಕ, ಜೀವನರಾವ ನಾಯಕ, ಭೀಮಣ್ಣ ಸಾಲಿ, ಚಂದ್ರಶೇಖರ ಅವಂಟಿ, ಕಣ್ವಾ ನಾಯಕ, ಚಂದ್ರಶೇಖರ ಕಾಶಿ, ನರಹರಿ ಕುಲಕರ್ಣಿ, ಕೋಟೆಶ್ವರ ರೇಷ್ಮಿ ಇದ್ದರು.
ಸಕಲ ಮಂಗಳ ವಾಧ್ಯಗಳೊಂದಿಗೆ ಗಣಪತಿ ಹಾಗೂ ದೇವಿಯ ಮೂರ್ತಿಯು ಹೊತ್ತ ಪಲ್ಲಕ್ಕಿ ಉತ್ಸವನ್ನು ಸರಾಫ್ ಲಚ್ಚಪ್ಪ ನಾಯಕರವರ ನಿವಾಸದಿಂದ ಆರಂಭಗೊಂಡು ಪಟ್ಟಣದ ಚಿತ್ತಾವಲಿ ಚೌಕ್, ಕಪಡಾ, ಕಿರಾಣಾ ಬಜಾರ, ಜನತಾ ಚೌಕ, ನಾಗಾವಿ ಚೌಕ ಹಾಗೂ ಒಂಟಿ ಕಮಾನ ಸೇರಿದಂತೆ ವಿವಿಧ ಪ್ರಮುಖ ಬೀದಿಗಳ ಮೂಲಕ ರಾತ್ರಿ ನಾಗಾವಿ ಯಲ್ಲಮ್ಮ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಬ್ಯಾಂಡ್ ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಲೇಜಿಮ್, ಕೋಲಾಟ, ಯುವಕರ ಕುಣಿತ, ಬಣ್ಣ ಬಣ್ಣದ ಕೊಡೆಗಳು, ಧ್ವಜಗಳು, ಭಜನೆ ಜನಮನ ಸೆಳೆದವು. ಸುಮಂಗಲೆಯರು ಹೊತ್ತ ಕಳಸ, ಕುಂಭ, ಬಬಲೇಶ್ವರ ತಾಲೂಕಿನ ಕಾಕಂಡಕಿಯ ಶ್ರೀ ಗಾಮದೇವಿ ಗೊಂಬೆ ಬಳಗದವರ ಕುಣಿತ ನೋಡುಗರಿಗೆ ಆಕರ್ಷಣೆಯಾಗಿದ್ದವು. ಸುಮಾರು 8 ತಾಸುಗಳವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಪಲ್ಲಕ್ಕಿಯು ದೇವಸ್ಥಾನದ ಗರ್ಭ ಗುಡಿಗೆ 5 ಸುತ್ತು ಹಾಕಲಾಯಿತು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಕರ್ನಾಟಕ, ಆಂಧ್ರ, ಮಹಾರಾಷ್ಟç ಸೇರಿದಂತೆ ನಾನಾ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ನೈವೆದ್ಯ ಸಲ್ಲಿಸಲು ಹಾಗೂ ದರ್ಶನ ಪಡೆಯಲು ಭಕ್ತರ ಉದ್ದನೇಯ ಸಾಲಿನಿಂದ ಕೂಡಿತ್ತು. ಕ್ಕಿಕ್ಕಿರಿದ ಜನಸ್ತೋಮದಿಂದಾಗಿ ದೇವಸ್ಥಾನ ಸೂತ್ತಲು ನೆರೆದಿದ್ದರು. ಸುಗಮ ದರ್ಶನಕ್ಕೆ ಪೋಲಿಸರು, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹರಸಾಹಸಪಟ್ಟರು. ದೇವಸ್ಥಾನಕ್ಕೆ ಸೇರಿದಂತೆ ಚಿತ್ತಾಪುರ ಪಟ್ಟಣದಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸಿತ್ತು.
ಅಪಾರ ಭಕ್ತರು ನಂದಿ ಬಾವಿಯಲ್ಲಿ ಮಿಂದು ದೇವಿಯ ದರ್ಶನ ಪಡೆದು ಪುನೀತರಾದರು. ಸಹಸ್ರಾರು ಸಂಖ್ಯೆಯಲ್ಲಿ ವಾಹನಗಳು ಬಂದಿರುವುದರಿಂದ 2 ಕೀಮೀ ವರೆಗೆ ಉದ್ದನೆಯ ಸಾಲಿನಲ್ಲಿ ನಿಲ್ಲಿಸಿದ್ದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಕರ ತಿಗಡಿ, ಜಗದೇವಪ್ಪ ಪಾಳಾ, ಪಿಎಸ್ಐ ಶ್ರೀಶೈಲ್ ಅಂಬಾಟಿ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದೇವಸ್ಥಾನಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ಅನ್ನ ದಾಸೋಹ ಅಬ್ಬರ:
ಭಕ್ತರಿಗಾಗಿ ಭಕ್ತರಿಂದ ದೇವಸ್ಥಾನದಲ್ಲಿ ಹಾಗೂ ದಾರಿಯುದ್ದಕ್ಕೂ ಅನ್ನ ದಾಸೋಹ, ಪ್ರಸಾದ ಅಬ್ಬರ ಹೆಚ್ಚಾಗಿತ್ತು. ಬಸ್ ನಿಲ್ದಾಣ, ಆಟೋ ಸ್ಟಾಂಡ್, ಅಂಬೇಡ್ಕರ್ ನಗರ, ಭುವನೇಶ್ವರಿ ವೃತ್ತ, ನಾಗಾವಿ ವೃತದಿಂದ ನಾಗಾವಿ ದೇವಸ್ಥಾನದವರೆಗೂ ಸುಮಾರು 80 ಕ್ಕೂ ಹೆಚ್ಚು ಕಡೆ ಅನ್ನದಾಸೋº ವ್ಯವಸ್ಥೆ ಕಲ್ಪಿಸಲಾಗಿತ್ತು. ಯುವಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಹೆಜ್ಜೆ ಹೆಜ್ಜೆಗೂ ಅನ್ನದಾಸೋಹ, ಪ್ರಸಾದ ವಿತರಿಸುವ ಪೆಂಡಾಲಗಳು ಹಾಕಿರುವುದು ಜನಮನ ಸೆಳೆಯಿತು. ಅನ್ನ, ಜೀರಾ ರೈಸ್, ಪಲಾವ, ಸೇರಿದಂತೆ ವಿವಿಧ ಬಗೆಯ ಅನ್ನದ ಪ್ರಸಾದ, ಸಜ್ಜಕ್, ಸೀರಾ, ಉಪ್ಪಿಟ್ಟು, ಮಿರ್ಚಿ ಭಜಿ, ಬಾಳೆಹಣ್ಣು, ಸೇಬು, ಕುಡಿಯುವ ನೀರಿನ ಬಾಟಲಗಳು ಸೇರಿದಂತೆ ವಿವಿಧ ಬಗೆಯ ಪ್ರಸಾದ ವ್ಯವಸ್ಥೆ ಮಾಡಿದ್ದರು.
