ಶಿವಯೋಗಿ ಸಿದ್ಧರಾಮೇಶ್ವರರ ಕೊಡುಗೆ ಅಪಾರ : ರವಿಚಂದ್ರ ಗುತ್ತೆದಾರ
ಜೇವರ್ಗಿ : ಹನ್ನೆರಡನೇ ಶತಮಾನದ ಶಿವಯೋಗಿ ಸಿದ್ದರಾಮೇಶ್ವರರು ವಚನಗಳನ್ನು ರಚಿಸಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕೇರೆ ಕಟ್ಟೆಗಳನ್ನ ಕಟ್ಟುವುದರ ಮುಖಾಂತರ ಹಾಗೂ ಅವರ ಕಾಯಕದ ಮುಲಕ ಅಪಾರವಾದ ಕೊಡುಗೆಯನ್ನು ಸಿದ್ದರಾಮೇಸ್ವರರು ನೀಡಿದ್ದಾರೆ ಎಂದು ವಕೀಲರಾದ ರವಿಚಂದ್ರ ಗುತ್ತೆದಾರ ಅಭಿಮತಪಟ್ಟರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಬುದವಾರ ಶಿವಯೋಗಿ ಸಿದ್ದರಾಮೇಶ್ವರರ 853ನೇ ಜಯಂತಿ ಕಾರ್ಯಕ್ರಮವನ್ನು ತಾಲೂಕ ಆಡಳಿತದವತೊಯಿಂದ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೆಶಿಸಿ ರವಿಚಂದ್ರ ಗುತ್ತೆದಾರ ಮಾತನಾಡಿ ಸಿದ್ದರಾಮೇಶ್ವರರು ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ’ ಅಂಕಿತವಿದೆ. ಸದ್ಯ ಈತನ 1162 ವಚನಗಳು ದೊರೆತಿದ್ದು, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ. ಕಾಯಕವೇ ಕೈಲಾಸ ಎಂದು ನಂಬಿ ಸಮಾಜದ ಅಭಿವದ್ಧಿಗೆ ಶ್ರಮಿಸಿದ್ದರು. ಲೋಕ ಕಲ್ಯಾಣಾರ್ಥವಾಗಿ ಕೆರೆ-ಕಟ್ಟೆಗಳು, ದೇವಾಲಯಗಳನ್ನು ನಿರ್ಮಾಣ, ಸಾಮೂಹಿಕ ವಿವಾಹ ಮುಂತಾದ ಜನಪರ ಕಾರ್ಯಗಳನ್ನ ಮಾಡಿದ್ದಾರೆ. ಅವರು ಕಾಯಕದ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ನಾವುಗಳು ಕೂಡ ಅವರ ವೇಧವಾಕ್ಯಂದಂತೆ ಕಾಯಕವೇ ಕೈಲಾಸ ಎಂದು ಬದುಕು ಸಾಗಿಸುತ್ತಿದ್ದೆವೆ. ಅವರ ಮಾರ್ಗದಲ್ಲಿ ನಮ್ಮ ಬದುಕು ಸಾಗಿಸಿದರೆ ಸರ್ವ ಸಿಗುತ್ತದೆ ಎಂದರು.
ಈ ಸಂಧರ್ಭದಲ್ಲಿ ತಾಲೂಕ ದಂಡಾಧೀಕಾರಿ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಧೀಕಾರಿ ಶಂಭುಲಿAಗ್ ದೇಸಾಯಿ, ಇ ಓ ರವಿಚಂದ್ರ ರೆಡ್ಡಿ, ಸಮಾಜ ಕಲ್ಯಾಣ ಅಧೀಕಾರಿ ಸತಿಷ ಸಾಂಗನ್, ಭೋವಿ ಸಮಾಜದ ತಾಲೂಕ ಅಧ್ಯಕ್ಷ ಶರಣು ಗುತ್ತೆದಾರ, ಭೀಮಾಶಂಕರ ಕುರುಡೇಕರ್, ಸೋಮಯ್ಯ ನೇದಲಗಿ, ಸಾಯಬಣ್ಣ ಗುತ್ತೆದಾರ, ನಿಂಗಣ್ಣ ಕಲ್ಲಹಂಗರಗಾ, ರಾಜು ಗುತ್ತೆದಾರ, ಅಣ್ಣಪ್ಪ ಬಂಜೆಪಲ್ಲಿ, ಸುನೀಲ್ ಗುತ್ತೆದಾರ, ಗುಂಡಪ್ಪ ನಾಯಕಲ್, ಪ್ರಕಾಶ ಹಾಲಗಡ್ಲಾ, ಮೌನೇಶ ಕುರುಡೇಕರ್, ನಾಗು ಗುತ್ತೆದಾರ, ಶರಣು ಲಿಂಬಾಳಕರ್, ವಿರೇಶ ಲಿಂಗಸೂರ, ಮರೆಪ್ಪ ಬಂಜೆಪಲ್ಲಿ, ಶಾಂತು ಶಖಾಪುರ, ದಶರಥ ಲಿಂಬಾಳಕರ್, ಅಮೋಘಸಿದ್ದ ಹುಲ್ಲೂರ, ಅರ್ಜುನ ಗುತ್ತೆದಾರ, ರಾಜು ಚೌವ್ಹಾಣ, ನಿಂಗರಾಜ ಗುತ್ತೆದಾರ, ಭೀಮು ಖಾದ್ಯಾಪೂರ, ಮೌನೇಶ ಹಂಗರಗಿ, ವಿಶ್ವ ಆಲೂರ, ದೇವಿಂದ್ರ ಬಡಿಗೇರ, ಪರಶು ನಾಯಕಲ್, ರಾಜು, ಯಲ್ಲಪ್ಪ.



