ಜಿಲ್ಲಾಸುದ್ದಿ

ಪುರಸಭೆ: ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ

ಪಟ್ಟಣದ ಬೀದಿಬದಿ ವ್ಯಾಪಾರಿಗಳಿಗೆ ಪುರಸಭೆ ವತಿಯಿಂದ ತರಬೇತಿನೀಡುವ ಮೂಲಕ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಸಮುದಾಯ ಸಂಘಟಕ ವಿಠ್ಠಲ್ ಹಾದಿಮನಿ ಹಾಗೂ ಇತರ ಅಧಿಕಾರಿಗಳುಇದ್ದರು.

ಚಿತ್ತಾಪುರ: ಪಟ್ಟಣದ ಬೀದಿಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಪುರಸಭೆ ವತಿಯಿಂದ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕುರಿತು ಒಂದು ದಿನದ ತರಬೇತಿ ನೀಡಲಾಯಿತು.

ಪ್ರಧಾನ ಮಂತ್ರಿ ಸ್ವಾನಿಧಿ ಲೋಕ ಕಲ್ಯಾಣ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳು ತರಬೇತಿ ಪಡೆದರು. ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದಪುರಸಭೆಯ ಸಮುದಾಯದ ಸಂಘಟನಾಧಿಕಾರಿ ವಿಠ್ಠಲ್ ಹಾದಿಮನಿ, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದೆ.ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಲ್ಲಿ ಪ್ರತಿ ವರ್ಷ ಹಲವು ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿ ದೆ . ಬೀದಿಬದಿ ವ್ಯಾಪಾರ ಸ್ಥರು ನೀಡಿದ ಸಾಲ ಮರುಪಾವತಿ ಮಾಡುವ ಮೂಲಕ ಸಹಕರಿಸಬೇಕು. ವ್ಯಾಪಾರದಲ್ಲಿ ಅಭಿವೃದ್ಧಿ ಕಂಡುಕೊಳ್ಳು ವ ಮೂಲಕ ಪ್ರಗತಿ ಸಾಧಿಸಬೇಕು ಎಂದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಪ್ರದೀಪ ಕುಮಾರ್ ಸೂಗೂರು ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಕಾನೂನು ಬಾಹಿರವಾಗಿದೆ. ವ್ಯಾಪಾರಸ್ಥರು ಪ್ಲಾಸ್ಟಿಕ್ ನಿಷೇಧಕ್ಕೆ ಕಡಿವಾಣ ಹಾಕಬೇಕು.ಗುಣಮಟ್ಟದ ಆಹಾರಗಳನ್ನು ವ್ಯಾಪಾರ ಮಾಡುವುದರಿಂದ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಬಹುದಾಗಿದೆ. ಆರು ತಿಂಗಳಿಗೊಮ್ಮೆ ವ್ಯಾಪಾರಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳ ಬೇಕು. ಹಾಗೆಯೇ ವ್ಯಾಪಾರ ವಹಿವಾಟಿನಲ್ಲಿ ಸಹ ಸ್ವಚ್ಛತೆ ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಕಂದಾಯ ಅಧಿಕಾರಿ ಶರಣಪ್ಪ ಮಡಿವಾಳ, ಹಿರಿಯ ಅರೋಗ್ಯ ಅಧಿಕಾರಿ ಲೋಹಿತ್ ಕಟ್ಟಿಮನಿ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಮ್.ಡಿಶಫಿ, ಸಿಆರ್‌ಪಿ ಲಕ್ಷ್ಮಿ ಹಾಗೂ ಸುಗುಣ ಸೇರಿದಂತೆ ಅನೇಕರು ಶಿಬಿರದಲ್ಲಿಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button