ಕಲಬುರಗಿಜಿಲ್ಲಾಸುದ್ದಿ

ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಕಾಳಜಿ ಬೆಳೆಸಿಕೊಳ್ಳಿ : ಬಟಗೇರಿ

ಜೇವರ್ಗಿ : ಯುವಕರು ಹಾಗೂ ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು. ಪರಿಸರದ ಬಗ್ಗೆ ಕಾಳಜಿಯನ್ನ ವಿಧ್ಯಾರ್ಥಿ ದಿಸೆಯಿಂದಲೆ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ರವೀಂದ್ರಕುಮಾರ ಸಿ. ಬಟಗೇರಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಮಂಗಳವಾರ ಜರುಗಿದ “ರಾಷ್ಟೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ” ಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕಾರ್ಯಕ್ರಮವನ್ನುದ್ದೆಶಿಸಿ ರವೀಂದ್ರಕುಮಾರ ಬಟಗೇರಿ ಮಾತನಾಡಿ ಪರಿಸರ ಮಾಲಿನ್ಯದ ಸಮಸ್ಯೆ ಪರಿಹರಿಸುವುದು ಸರ್ಕಾರಗಳು ಮತ್ತು ವ್ಯಕ್ತಿಗಳಿಬ್ಬರ ಹಂಚಿಕೆಯ ಜವಾಬ್ದಾರಿಯಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ಪರಿಸರವನ್ನು ರಕ್ಷಿಸಲು ಸಹಯೋಗದ ಪ್ರಯತ್ನಗಳು ಮತ್ತು ನವೀನ ತಂತ್ರಗಳು ಅತ್ಯಗತ್ಯ. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು

ವಿಶೇಷ ಉಪನ್ಯಾಸಕ ನೀಡಿದ ಜೀವಶಾಸ್ತ್ರ ಉಪನ್ಯಾಸಕ ಶರಣು ಸುರಪುರ, ಪಟಾಕಿ ಸಿಡಿಸುವುದು, ಇಂಗಾಲದ ಹೊರಸೂಸುವಿಕೆ, ಕೈಗಾರಿಕಾ ಅನಿಲ ಸೋರಿಕೆ ಮತ್ತು ಬಾಂಬ್ ಸ್ಫೋಟಗಳು ಸೇರಿದಂತೆ ಹಲವಾರು ಅಂಶಗಳು ಮಾಲಿನ್ಯಕ್ಕೆ ಕಾರಣವಾಗಿವೆ. ಜಾಗತಿಕವಾಗಿ ಮಾಲಿನ್ಯದ ಮಟ್ಟಗಳು ಏರುತ್ತಲೇ ಇವೆ. ಮಾಲಿನ್ಯ ನಿಯಂತ್ರಣ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ್, ಶಿಕ್ಷಣ ಪ್ರೇಮಿ ಬಸವರಾಜ ಹಡಪದ, ಉಪನ್ಯಾಸಕರಾದ ಸುವರ್ಣಲತಾ ಭಂಡಾರಿ, ಲಿಂಗರಾಜ ಹಿರೇಗೌಡ, ವೀರೇಶ್ ಗೋಗಿ, ಅಲಿಯಾ ತಬಸ್ಸುಮ್, ನಾರಾಯಣಸ್ವಾಮಿ, ದ್ವಿದಸ ರಾಮಚಂದ್ರ ಚವ್ಹಾಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button