ಕಲಬುರಗಿಜಿಲ್ಲಾಸುದ್ದಿ

ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ 4,233 ಉಚಿತ ಶಾಲಾ ಬ್ಯಾಗ್ ವಿತರಣೆ

ನೊವೆಲ್ ಹೋಪ್ ಫೌಂಡೇಶನ್ ವತಿಯಿಂದ ನದಿಸಿನ್ನೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

ಕಲಬುರಗಿ: ಬೆಂಗಳೂರು ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ ಕಲಬುರಗಿ ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಬೆಂಬಲ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಅಂಗವಾಗಿ ಒಟ್ಟು 26 ಸರ್ಕಾರಿ ಶಾಲೆಗಳಿಗೆ 4,233 ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ನದಿಸಿನ್ನೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಇಂದು ಬ್ಯಾಗ್‌ಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಹೆಚ್‌ಎಫ್ ಸೀನಿಯರ್ ಸಿಎಸ್‌ಆರ್ ಎಕ್ಸಿಕ್ಯೂಟಿವ್ ದೀಪಕ್ ಆರ್ ಅವರು, ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಶಾಲಾ ಹಾಜರಾತಿಯನ್ನು ಉತ್ತೇಜಿಸಲು ಈ ಉಚಿತ ಬ್ಯಾಗ್ ವಿತರಣೆ ನೆರವಾಗಲಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳು, ವಾಟರ್ ಬಾಟಲ್‌ಗಳು, ಟ್ರಾಕ್ ಸೂಟ್‌ಗಳು ವಿತರಿಸಲು ಯೋಜನೆ ಇದ್ದು, ಅಗತ್ಯವಿರುವಲ್ಲಿ ಶೌಚಾಲಯಗಳ ನಿರ್ಮಾಣಕ್ಕೂ ಸಹಕಾರ ನೀಡಲು ಸಿದ್ಧವಿರುವುದಾಗಿ ಅವರು ತಿಳಿಸಿದರು. “ಈ ಭಾಗಕ್ಕೆ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮುಂದುವರಿಸುತ್ತೇವೆ,” ಎಂದು ದೀಪಕ್ ಆರ್ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಆರ್‌ಪಿ ಬಸಮ್ಮ, ಶಿಕ್ಷಣ ಸಂಯೋಜಕ ದಿನೇಶ್ ತಂಬಾಡ್, ಎಸ್‌ಡಿಎಂಸಿ ಅಧ್ಯಕ್ಷ ಶಂಕರ್ ಕಟ್ಟಿಮನಿ, ಮುಖ್ಯಗುರು ಮೌನೇಶ್ ಬಡಿಗೇರ, ವಿಜಯಲಕ್ಷ್ಮಿ ಲಿಂಗರಾಜ್ ತಾರಫೈಲ್, ವಿಜಯಕುಮಾರ್, ಸುನಂದ ವಿಜಯಕುಮಾರ್, ಮಹಬೂಬ್, ಗಿರಿಜಾ, ದೇವಕಮ್ಮ, ಸುಜಾತ, ಆಶಾರಾಣಿ ಸೇರಿದಂತೆ ಶಿಕ್ಷಕರು ಹಾಗೂ ಗಣ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button