ಕಲಬುರಗಿಜಿಲ್ಲಾಸುದ್ದಿ

“ಪ್ರಿಯಾಂಕ ಖರ್ಗೆ ಹುಟ್ಟುಹಬ್ಬದ : ಯುವಕರಿಗೆ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ”

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಐಟಿ–ಬಿಟಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಯುವ ಹುಟ್ಟುಹಬ್ಬದ ಅಂಗವಾಗಿ, ಕಲಬುರಗಿಯಲ್ಲಿ ಯುವಕರಿಗಾಗಿ ವಿಶೇಷ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿ ಶಿಬಿರವನ್ನು ಆರಂಭಿಸಲು ತಯಾರಿ ನಡೆಯುತ್ತಿದೆ.

ನಗರದ ರೆಡ್ಡಿಸ್ ಇನ್ಸ್ಟಿಟ್ಯೂಟ್ ಕಂಪ್ಯೂಟರ್ ತರಬೇತಿ ಕೇಂದ್ರ ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ ಜಂಟಿಯಾಗಿ ಆಯೋಜಿಸಿರುವ ಈ ತರಬೇತಿ ಕಾರ್ಯಕ್ರಮದಲ್ಲಿ 18 ರಿಂದ 30 ವರ್ಷ ವಯೋಮಿತಿಯ, 10ನೇ ತರಗತಿ ಅಥವಾ ಪಿಯುಸಿ ಪಾಸಾದ/ಫೇಲಾದ ಹಾಗೂ ವಿದ್ಯಾಭ್ಯಾಸ ಮುಂದುವರಿಸಲಾಗದ ಯುವಕ ಯುವತಿಯರು ಭಾಗವಹಿಸಬಹುದು.

ಉಚಿತ ತರಬೇತಿ ಕಾರ್ಯಕ್ರಮವನ್ನು
22-11-2025
ಮುಂಜಾನೆ 11 ಗಂಟೆಗೆ
ಶಾಸಕರಾದ ಅಲ್ಲಂಪ್ರಭು ಪಾಟೀಲ (ಎಂಎಲ್‌ಸಿ) ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಜಗದೇವ ಗುತ್ತೇದಾರ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ತಿಳಿಸಿದ್ದಾರೆ.

ತರಬೇತಿಗೆ ಅಗತ್ಯ ದಾಖಲೆಗಳು:

  • ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ (ಜೆರಾಕ್ಸ್)
  • ಜಾತಿ ಪ್ರಮಾಣ ಪತ್ರ (ಜೆರಾಕ್ಸ್)
  • ಆಧಾರ್ ಕಾರ್ಡ್ (ಜೆರಾಕ್ಸ್)
  • 2 ಪಾಸ್‌ಪೋರ್ಟ್ ಫೋಟೋಗಳು

ತರಬೇತಿ ಕೇಂದ್ರ ವಿಳಾಸ: ರೆಡ್ಡಿಸ್ ಇನ್ಸ್ಟಿಟ್ಯೂಟ್ ಕಂಪ್ಯೂಟರ್ ತರಬೇತಿ ಕೇಂದ್ರ, ಪ್ರಥಮ ಮಹಡಿ, ಜವಳಕರ್ ಕಾಂಪ್ಲೆಕ್ಸ್, ಲಾಲಗೇರಿ ಕ್ರಾಸ್, ಎಸ್.ಬಿ. ಟೆಂಪಲ್ ರಸ್ತೆ, ಕಲಬುರಗಿ

ಸಂಪರ್ಕಕ್ಕೆ: 9845550722 / 8970298888

ಸಂಸ್ಥೆಯ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಕೋರಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button