ಕಲಬುರಗಿಜಿಲ್ಲಾಸುದ್ದಿ

ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅವಮಾನ: ಬೃಹತ್ ಪ್ರತಿಭಟನೆ

ಕಲಬುರಗಿ: ಶಾಹಾಪುರ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ದಿನಾಂಕ 08-10-2025 ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಹಾನಿಯುಂಟುಮಾಡಲಾಗಿದೆ. ಮೂರ್ತಿಯ ಮುಖಕ್ಕೆ ಸಗಣಿ ಎಸೆದು, ಮೂರ್ತಿಯನ್ನು ಉದ್ದೇಶಪೂರ್ವಕವಾಗಿ ಭಗ್ನಗೊಳಿಸಿರುವ ದುಷ್ಕೃತ್ಯಕ್ಕೆ ಖಂಡನೆ ವ್ಯಕ್ತಪಡಿಸಿ, ಗಂಗಾನಗರ ಕಲಬುರಗಿಯ ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರು ಗಂಗಾನಗರದಿಂದ ಜಗತ್ ವೃತ್ತದವರೆಗೆ ಬಂದು ಟೈರಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಪ್ರತಿಭಟನೆಯನ್ನು ಮಾತನಾಡಿದ ಅವರು, “ಹನ್ನೆರಡನೇ ಶತಮಾನದಲ್ಲಿ ಅಲ್ಲಮಪ್ರಭು, ಬಸವಣ್ಣನವರ ಜತೆಗೂಡಿ ಶರಣ ಸಂಸ್ಕೃತಿಗೆ ಶ್ರೇಷ್ಠ ಸೇವೆ ಸಲ್ಲಿಸಿದ ನಿಜ ಶರಣ ಅಂಬಿಗರ ಚೌಡಯ್ಯನವರು ಇಡೀ ಭಾರತದೆಲ್ಲೆಡೆ ಕೋಲಿ-ಕಬ್ಬಲಿಗ ಸಮುದಾಯದವರು ಪೂಜಿಸುವ ಮಹಾನ್ ಶರಣರು. ಇಂತಹ ಶ್ರದ್ಧೆಯ ಅರ್ಹರಾದ ಮೂರ್ತಿಗೆ ಅವಮಾನವಾಯಿತು ಎಂಬುದು ನಮ್ಮ ಸಮಾಜಕ್ಕೆ ಘೋರ ಆಘಾತವಾಗಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೇಡಿಕೆಗಳು:

  • ಈ ಹೀನಕೃತ್ಯ ಎಸಗಿದ ಸಮಾಜದ್ರೋಹಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು.
  • ಮುತ್ತಗಿ ಗ್ರಾಮದಲ್ಲೇ ಭವ್ಯವಾದ ಹೊಸ ಮೂರ್ತಿಯನ್ನು ಸ್ಥಾಪಿಸಬೇಕು.
  • ಸರ್ಕಾರದಿಂದ ಮೂರ್ತಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.

ಅವರು ಎಚ್ಚರಿಸಿ ಹೇಳಿದ್ದು: “ನಮ್ಮ ಬೇಡಿಕೆ ಈಡೇರಿಸಲಾಗದಿದ್ದರೆ, ಕಲಬುರಗಿ ಜಿಲ್ಲೆ ಮಟ್ಟದ ಬಂದ್ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ, ಅದಕ್ಕೆ ಸರ್ಕಾರವೇ ಹೊಣೆಗಾರವಾಗಿರುತ್ತದೆ.”

ಪ್ರತಿಭಟನೆಯಲ್ಲಿ ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ಅಧ್ಯಕ್ಷ ರಮೇಶ ಜಮಾದಾರ, ಕಾರ್ಯಾಧ್ಯಕ್ಷ ರಾಕೇಶ್ ಜಮಾದಾರ, ಸಮಾಜದ ಹಿರಿಯರು ಮತ್ತು ಹಲವು ಯುವಕರು.

Related Articles

Leave a Reply

Your email address will not be published. Required fields are marked *

Back to top button