ಎಐ ಕ್ರಾಂತಿ: ವಿದ್ಯಾರ್ಥಿಗಳಿಂದ ಕೆಲವೇ ಗಂಟೆಗಳಲ್ಲಿ ವೆಬ್‌ಸೈಟ್ ಮತ್ತು ಮೊಬೈಲ್ ಆಪ್ ನಿರ್ಮಾಣ
ಎಮ್.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕಾರ್ಯಾಗಾರ

ಕಲಬುರಗಿ: ನಗರದ ಎಮ್.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ‘ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ತಂತ್ರಜ್ಞಾನ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಹಾಗೂ ಸಿಇಒ ಯತೀಶ್ ಕೆ.ಎಸ್., ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಕೇವಲ ಇಂಜಿನಿಯರ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೂ ಈ ತಂತ್ರಜ್ಞಾನದಿಂದ ಅನೇಕ ಅವಕಾಶಗಳು ಲಭ್ಯವಿವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯತಿಕಾರ್ಪ್‌ನ ನೂತನ AI ಕಾರ್ಡ್ ಅನ್ನು ಪರಿಚಯಿಸಲಾಯಿತು.
ಕಾರ್ಯಕ್ರಮದ ವಿಶೇಷತೆಯೆಂದರೆ, ಯಾವುದೇ ತಾಂತ್ರಿಕ ಹಿನ್ನೆಲೆ ಇಲ್ಲದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು YATICORP AI Card ಸಹಾಯದಿಂದ ಕೇವಲ ಕೆಲವೇ ಗಂಟೆಗಳಲ್ಲಿ ತಮ್ಮದೇ ಆದ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿ ಪ್ರದರ್ಶಿಸಿದರು. ಕೋಡಿಂಗ್ ಜ್ಞಾನವಿಲ್ಲದಿದ್ದರೂ ಎಐ ತಂತ್ರಜ್ಞಾನವನ್ನು ಬಳಸಿ ಸೃಜನಶೀಲವಾಗಿ ಬೆಳೆಯಬಹುದು ಎಂಬುದನ್ನು ವಿದ್ಯಾರ್ಥಿಗಳು ಸಾಬೀತುಪಡಿಸಿದರು.
ಈ ಸಂದರ್ಭದಲ್ಲಿ ಯತಿಕಾರ್ಪ್ ನಿರ್ದೇಶಕರಾದ ಪ್ರಖ್ಯಾತ ರೈ, ಜನರಲ್ ಮ್ಯಾನೇಜರ್ ಕೃಪಾ ಕೆ., ಮತ್ತು ಜೆಸ್ಕಾಮ್‌ನ ಹಿರಿಯ ಕೌಶಲ್ಯ ತರಬೇತಿ ಸಂಯೋಜಕ ರವಿ ಸಂಗಶೆಟ್ಟಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ ಮತ್ತು ಕಾರ್ಯದರ್ಶಿ ಜಗನ್ನಾಥ್ ನಾಗೂರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾಲೇಜಿನ ಸಿಬ್ಬಂದಿಗಳಾದ ಮಂಜುನಾಥ್ ಬನ್ನೂರ್, ನಾಗರಾಜ್ ಪಟ್ಟಣಕರ್, ಶಿವಶರಣಪ್ಪ ಪೂಜಾರಿ, ಅಮರ್ ಹಾಗರಗ, ದೇವೇಂದ್ರಪ್ಪ ಸಜ್ಜನ್, ರಾಧಿಕಾ ಗುತ್ತೇದಾರ್, ಶ್ರೀದೇವಿ ಹಿರೇಮಠ, ಗುರುಬಾಯಿ ವಾಡಿ, ಅಂಬಿಕಾ ಪಟನೆ, ಜ್ಯೋತಿ ಹಂಗರಗಿ, ರೇಷ್ಮಾ ರಾಥೋಡ್, ಜೈಶ್ರೀ ದೇಶಮುಖ್, ಶಿಲ್ಪ ಚೆಟ್ಟಿ, ಗೀತಾ ಇಂಗಿನ್, ಸಂತೋಷ್ ಲಸ್ಕರ್, ಕಾಶಿಬಾಯಿ ವಗ್ಗೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಈ ಕ್ರಾಂತಿಕಾರಿ ಕಾರ್ಯಾಗಾರಕ್ಕೆ ಸಾಕ್ಷಿಯಾದರು.



