ತಾಲೂಕಾ ಹೂಗಾರ ಸಮಾಜದ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ಆಯ್ಕೆ

ಅಫಜಲಪುರ: ಪಟ್ಟಣದ ಶ್ರೀ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾಲೂಕ ಹೂಗಾರ ಸಮಾಜದ ನೂತನ ಅಧ್ಯಕ್ಷರಾಗಿ ಘತ್ತರಗಾ ಗ್ರಾಮದ ಚಂದ್ರಕಾಂತ ಕೆ. ಹೂಗಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾಗಿ ರೇವಣಸಿದ್ದ ಎಸ್. ಹೂಗಾರ, ಉಪಾಧ್ಯಕ್ಷರಾಗಿ ಸುರೇಶ ಎಸ್. ಹೂಗಾರ ಹಾಗೂ ಚಂದ್ರಕಾಂತ ಸಾಯಿಬಣ್ಣ ಹೂಗಾರ (ಅತನೂರ), ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ ಕೆ. ಹೂಗಾರ ಮತ್ತು ಭಾಗಣ್ಣ ಎಚ್. ಹೂಗಾರ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಶೈಲ ಎಸ್. ಹೂಗಾರ ಹಾಗೂ ಮಾಧ್ಯಮ ಸಲಹೆಗಾರರಾಗಿ ಪುಟ್ಟು (ಲಕ್ಷ್ಮೀಕಾಂತ) ಹೂಗಾರರನ್ನು ಆಯ್ಕೆ ಮಾಡಲಾಯಿತು.
ಹೂಗಾರ ಸಮಾಜದ ನೂತನ ಅಧ್ಯಕ್ಷರಾದ ಚಂದ್ರಕಾಂತ ಕೆ. ಹೂಗಾರ ಮಾತನಾಡಿ, ಹೂಗಾರ ಸಮಾಜವನ್ನು ಸಂಘಟಿತಗೊಳಿಸಿ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆಸುವ ಗುರಿ ಹೊಂದಿರುವುದಾಗಿ ಹೇಳಿದರು.
ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ, ಸಮಾಜದ ಏಕತೆಯನ್ನು ಬಲಪಡಿಸುವುದು ತನ್ನ ಪ್ರಮುಖ ಆದ್ಯತೆ ಎಂದು ತಿಳಿಸಿದರು. ಸರ್ಕಾರದ ಸೌಲಭ್ಯಗಳು ಪ್ರತಿಯೊ ಬ್ಬರಿಗೂ ತಲುಪುವಂತೆ ಕಾರ್ಯ ನಿರ್ವ ಹಿಸಲಾಗುವುದು ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ.ಆರ್. ಹೂಗಾರ ಅವರು ಮಾತನಾಡಿ, ಹೂಗಾರ ಸಮಾಜವು ರಾಜ್ಯದಾದ್ಯಂತ ಬಲಿಷ್ಠವಾಗಿ ಬೆಳೆಯಬೇಕಾದರೆ ಸಂಘಟನೆಯ ಶಕ್ತಿ ಅತ್ಯಂತ ಮುಖ್ಯ ಎಂದು ಹೇಳಿದರು.
ಗ್ರಾಮದಿಂದ ಜಿಲ್ಲೆ ಮಟ್ಟದವರೆಗೆ ಸಂಘಟನೆಯನ್ನು ಚುರುಕುಗೊಳಿಸಿ, ಸಮಾಜದ ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಯುವಜನತೆ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ ಪುಸ್ಪದ್, ಜಿಲ್ಲಾ ಸಹ ಕಾರ್ಯದರ್ಶಿ ರಾಜಶೇಖರ ಹೂಗಾರ ಸೇರಿದಂತೆ ಸಮಾಜದ ಮುಖಂಡರಾದ ನಿಂಗಣ್ಣ ಹೂಗಾರ, ರಮೇಶ್ ಹೂಗಾರ, ಮಹಾಂತೇಶ ಹೂಗಾರ, ಶಂಕರ ಹೂಗಾರ, ಮಂಜು ಹೂಗಾರ, ಚನ್ನಬಸು ಅವಟೆ, ಶರಣಪ್ಪ ಅವಟೆ, ಅಂಬಾದಾಸ ಹೂಗಾರ, ಕಲ್ಲಪ್ಪ ಹೂಗಾರ, ಗುಂಡಪ್ಪ ಹೂಗಾರ, ಗಜಾನಂದ ಹೂಗಾರ, ಶಿವಲಿಂಗ ಹೂಗಾರ, ನಿಂಗಪ್ಪ ಹೂಗಾರ, ಶಿವು ಹೂಗಾರ, ಶೇಖರ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಅಫಜಲಪುರ ಮಳೇಂದ್ರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಚಿಂಚೋಳಿ ಗ್ರಾಮದ ಆನಂದ ಆಶ್ರಮದ ಶ್ರೀ ಶರಣ ಬಸವ ಶರಣರು ಸಾನಿಧ್ಯ ವಹಿಸಿದರು.



